ಕರ್ನಾಟಕ

karnataka

ETV Bharat / state

ಗಾಂಜಾ ದಂಧೆಯಲ್ಲಿ ವಿದ್ಯಾರ್ಥಿಗಳು ಭಾಗಿ; ಇನ್ ಸೈಡ್ ಸ್ಟೋರಿ - ಬಸವನಗುಡಿ ಪೊಲೀಸ್ ಠಾಣೆ

ಬೆಂಗಳೂರಿನಲ್ಲಿ ಗಾಂಜಾ ಸದ್ದು ಜೋರಾಗಿದ್ದು, ಈಗಾಗಲೇ ಆರೋಪಿಗಳ ಬೆನ್ನತ್ತಿರುವ ಸಿಸಿಬಿ ಪೊಲೀಸರು ಸಾಕಷ್ಟು ಜನರನ್ನ ಹಿಡಿದು ಬಂಧಿಸಿದ್ದಾರೆ. ಇದರ ನಡುವೆಯೇ ಸಿಟಿಯಲ್ಲಿ ವಿದ್ಯಾರ್ಥಿಗಳು ಗಾಂಜಾಗೆ ದಾಸರಾಗ್ತಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ.

Marijuana
ಗಾಂಜಾ

By

Published : Sep 3, 2020, 5:51 PM IST

ಬೆಂಗಳೂರು:ಗಾಂಜಾ ದಂಧೆಯ ಬಗ್ಗೆ ಸಮರ ಸಾರಿರುವ ಪೊಲೀಸ್ ಇಲಾಖೆ ಈಗಾಗಲೇ ಹಲವಾರು ಜನರನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆಯೇ ವಿದ್ಯಾರ್ಥಿಗಳು ಈ ಗಾಂಜಾಗೆ ದಾಸರಾಗ್ತಿದ್ದಾರಾ ಅನ್ನೋ. ಪ್ರಶ್ನೆ ಎದ್ದಿದೆ.

ಸಿಲಿಕಾನ್ ಸಿಟಿಯಲ್ಲಿ ಗಾಂಜಾ ಸದ್ದು ಜೋರಾಗಿದೆ. ಈಗಾಗಲೇ ಆರೋಪಿಗಳ ಬೆನ್ನತ್ತಿರುವ ಸಿಸಿಬಿ ಸಾಕಷ್ಟು ಜನರನ್ನ ಹಿಡಿದು ತಂದು ಬಂಧಿಸುತ್ತಿದ್ದಾರೆ. ಇದರ ನಡುವೆಯೇ ಸಿಟಿಯಲ್ಲಿ ವಿದ್ಯಾರ್ಥಿಗಳು ವಿದ್ಯಾವಂತರು ಈ ಗಾಂಜಾಗೆ ದಾಸರಾಗ್ತಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣ ಸಿಟಿಯಲ್ಲಿ ದಾಖಲಾದ ಕೇಸ್​ಗಳು.

ಈಗಾಗಲೇ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮೂರು ಕೇಸ್ ಗಳು ಪ್ರತ್ಯೇಕ ಠಾಣೆಗಳಲ್ಲಿ ದಾಖಲಾಗಿದೆ. ಅದರ ಕೇಸ್ ಸ್ಟಡಿ ನೋಡೋದಾದ್ರೆ.

1. ಬಂಡೆಪಾಳ್ಯ ಪೊಲೀಸ್ ಠಾಣೆ

ಬಂಡೇಪಾಳ್ಯದ ಸೋಮಸಂದ್ರ ಪಾಳ್ಯದ ಬಳಿ ರಾತ್ರಿ 8:30 ಕ್ಕೆ ಕೂಗಾಡಿಕೊಂಡು ಮಾತನಾಡಿಕೊಂಡು ನಿಂತಿದ್ದ ವಿದ್ಯಾರ್ಥಿಗಳನ್ನ ಪರಿಶೀಲನೆ ನಡೆಸಲಾಗಿ. ವಿದ್ಯಾರ್ಥಿಗಳು ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಬೀಟ್ ನಲ್ಲಿದ್ದ ಪೊಲೀಸರು ಅವರನ್ನ ಪರಿಶೀಲಿಸಿದಾಗ ಸಿಗರೇಟ್ ನಲ್ಲಿ ಗಾಂಜಾ ಪುಡಿ ಹಾಕಿ ಸೇದುತ್ತಿದ್ದುದು ಕಂಡು ಬಂದ ಹಿನ್ನೆಲೆ ವಿದ್ಯಾರ್ಥಿಗಳನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಅಲ್ಲದೆ ಅವರನ್ನ ಕೋವಿಡ್ ಟೆಸ್ಟ್​ಗೆ ಒಳಪಡಿಸಿದಾಗ ಪಾಸಿಟಿವ್ ಇರುವುದು ಕಂಡು ಬಂದ ಹಿನ್ನೆಲೆ. ಅವರನ್ನ ಕೋವಿಡ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

2. ಬಸವನಗುಡಿ ಪೊಲೀಸ್ ಠಾಣೆ

ಇನ್ನೂ ಬಸವನಗುಡಿ ಪೊಲೀಸ್ ಠಾಣೆ ಬಳಿ ಬೀಟ್ ನಲ್ಲಿದ್ದ ಪೊಲೀಸರಿಗೆ ವಿದ್ಯಾರ್ಥಿಯೋರ್ವ ಸಿಕ್ಕಿ ಬಿದ್ದಿದ್ದು. ಖಾಜಿ ಸ್ಟ್ರೀಟ್ ರಸ್ತೆಯಲ್ಲಿ ಅನುಮಾನಸ್ಪದವಾಗಿ ನಿಂತಿದ್ದ ವಿದ್ಯಾರ್ಥಿ ಕೈಯ್ಯಲ್ಲಿ ಸಿಗರೇಟ್ ಹಿಡಿದು ನಿಂತಿದ್ದ ಇದನ್ನ ವಿಚಾರಿಸಿದಾಗ ಆತ ಅಮಲಿನಲ್ಲಿದ್ದುದ್ದು ತಿಳಿದು ಬಂದಿದ್ದು, ಆತನನ್ನ ವಿಚಾರಣೆ ನಡೆಸಿದಾಗ ಸಿಗರೇಟ್ ನಲ್ಲಿ ಪುಡಿ ಹಾಕಿ ಸೇದುತ್ತಿದ್ದ ಅನ್ನೋ ಅಂಶ ಬಯಲಾಗಿದೆ. ಸದ್ಯ ಸೈಯ್ಯದ್ ಎನ್ನುವ ವಿದ್ಯಾರ್ಥಿಯನ್ನ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಎಫ್​ಐಆರ್​ ಪ್ರತಿ

3. ಬೇಗೂರು ಪೊಲೀಸ್ ಠಾಣೆ

ಇತ್ತ ಬೇಗೂರು ಪೊಲೀಸ್ ಠಾಣೆಯಲ್ಲಿ ವಿಶ್ವಪ್ರಿಯಾ ಲೇಔಟ್ ಬಳಿ ಗಾಂಜಾ ಮಾರಾಟ ಮಾಡಲು ನಿಂತಿದ್ದ ವ್ಯಕ್ತಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳದಿಂದ ಗಾಂಜಾ ಮಾರಾಟ ಮಾಡಲು ನಿಂತಿದ್ದ ವ್ಯಕ್ತಿಗಳನ್ನ ಅರೆಸ್ಟ್​ ಮಾಡಿದ್ದಾರೆ. ಇದರಲ್ಲಿ ಓರ್ವ ವಿದ್ಯಾರ್ಥಿ ಇರುವುದು ಕೂಡ ದೃಢ ಪಟ್ಟಿದ್ದು, ಅವನು ಕೂಡ ಇದರಲ್ಲಿ ಭಾಗಿಯಾಗಿದ್ದ ಎನ್ನುವ ಮಾಹತಿ ಇತ್ತು ಸದ್ಯ ಆತನನ್ನೂ ಕೂಡ ವಿಚಾರಣೆ ನಡೆಸಿ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಎಫ್​ಐಆರ್​ ಪ್ರತಿ

ಒಟ್ಟಿನಲ್ಲಿ ಗಾಂಜಾ ವಿರುದ್ಧ ಬೇಟೆಗಿಳಿದಿರುವ ಪೊಲೀಸರು ಪ್ರತಿಯೊಂದು ಠಾಣೆ ಅಧಿಕಾರಿಗಳು ತಮ್ಮ ತಮ್ಮ ಏರಿಯಾಗಳಲ್ಲಿ ನಡೆಯುತ್ತಿರುವ ಗಾಂಜಾ ದಂಧೆಗೆ ಬ್ರೇಕ್ ಹಾಕುತ್ತಿದ್ದಾರೆ. ವಿಪರ್ಯಾಸ ಅಂದ್ರೆ ವಿದ್ಯಾರ್ಥಿಗಳೂ ಇದರಲ್ಲಿ ಇದ್ದು ಇದರ ಮೂಲ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದು ತನಿಖೆಯ ನಂತರ ಗಾಂಜಾ ಜಾಲಾ ಬಗ್ಗೆ ಮಾಹಿತಿ ಹೊರಬೀಳಲಿದೆ.

ABOUT THE AUTHOR

...view details