ಕರ್ನಾಟಕ

karnataka

ETV Bharat / state

ಕ್ಯಾನ್ಸರ್​ ಪೀಡಿತ ರೋಗಿಗಳಿಗಾಗಿ ತಮ್ಮ ತಲೆಗೂದಲು ದಾನ ಮಾಡಿದ ವಿದ್ಯಾರ್ಥಿನಿಯರು! - cancer patients

ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಉಚಿತವಾಗಿ ವಿಗ್​ ತಯಾರಿಸಿ ಕೊಡಲು ಟಿ-ಜಾನ್ ಕಾಲೇಜಿನ ವಿದ್ಯಾರ್ಥಿನಿಯರು ಕೂದಲು ಕೊಡುಗೆ ಅಭಿಯಾನ ನಡೆಸಿದ್ದಾರೆ.

students
ವಿದ್ಯಾರ್ಥಿನಿಯರು

By

Published : Mar 16, 2020, 11:27 PM IST

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬನ್ನೇರುಘಟ್ಟ ರಸ್ತೆಯ ಟಿ-ಜಾನ್ ಕಾಲೇಜಿನ ಎನ್ಎಸ್ಎಸ್ ಕ್ಯಾಂಪ್​ನ ನೂರಾರು ವಿದ್ಯಾರ್ಥಿನಿಯರು ಕ್ಯಾನ್ಸರ್​ ಪೀಡಿತರಿಗೆ ಉಚಿತವಾಗಿ ವಿಗ್​ ತಯಾರಿ ಕೊಡುವ ಸಲುವಾಗಿ ತಮ್ಮ ಕೇಶ ದಾನ ಮಾಡಿದ್ದಾರೆ.

ಎಸ್ ಹೇರ್ ಎನ್ನುವ ಶೀರ್ಷಿಕೆಯಡಿ ಶಿ ಬ್ಯೂಟಿಫುಲ್ ಎಂದು ವಿದ್ಯಾರ್ಥಿನಿಯರು ತಮ್ಮ ತಲೆಯ ಮುಡಿಯನ್ನು ದಾನವಾಗಿ ನೀಡಿ ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಕ್ಯಾನ್ಸರ್​ ಪೀಡಿತ ರೋಗಿಗಳಿಗಾಗಿ ತಮ್ಮ ತಲೆ ಕೂದಲು ದಾನ ಮಾಡಿದ ವಿದ್ಯಾರ್ಥಿನಿಯರು

ಕೂದಲು ಕೊಡೋದು ಅಂದ್ರೆ ನುಣ್ಣಗೆ ತಲೆ ಬೋಡ ಮಾಡಿ ನೀಡೋದಲ್ಲ. ತಲೆ ಹಿಂದಿನ ಒಂದಿಷ್ಟು ಕೂದಲು ನೀಡೋದು ಅಂತ ವಿದ್ಯಾರ್ಥಿನಿಯರು ತೋರಿಸಿಕೊಟ್ಟಿದ್ದಾರೆ. ಕ್ಯಾನ್ಸರ್​ ಚಿಕಿತ್ಸೆ ವೇಳೆ ಕೀಮೋಥೆರಪಿಯಿಂದ ಕೂದಲು ಕಳೆದುಕೊಂಡು ಕೀಳರಿಮೆಯಿಂದ ನರಳುವವರಿಗೆ ವಿಗ್​ ತಯಾರಿಸಿ ಉಚಿತವಾಗಿ ನೀಡುವ ಗ್ರೀನ್​ ಟ್ರಂಡ್ಸ್ ಸಂಸ್ಥೆಗೆ ತಮ್ಮ ಕೇಶವನ್ನು ನೀಡಿದ್ದಾರೆ.

ABOUT THE AUTHOR

...view details