ಕರ್ನಾಟಕ

karnataka

ETV Bharat / state

ವಾಹನ ಒವರ್‌ಟೇಕ್ ಮಾಡುವ ಭರದಲ್ಲಿ ವಿದ್ಯಾರ್ಥಿ ಸಾವು - ಬೆಂಗಳೂರು ಅಪರಾಧ ಸುದ್ದಿ

ಹೊಸೂರಿನಿಂದ ಆನೇಕಲ್-ಚಂದಾಪುರದ ಫ್ಲೈ ಓವರ್​ನ ಮೇಲೆ ದ್ವಿಚಕ್ರವಾಹನದಲ್ಲಿ ಬರುವಾಗ ತಡೆಗೋಡೆಗೆ ಡಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.

student died by accident in anekal
ವಿದ್ಯಾರ್ಥಿ ಸಾವು

By

Published : Dec 5, 2019, 3:23 PM IST

ಬೆಂಗಳೂರು/ಆನೇಕಲ್​:ಹೊಸೂರಿನಿಂದ ಆನೇಕಲ್-ಚಂದಾಪುರದ ಫ್ಲೈ ಓವರ್​ನ ಮೇಲೆ ಬೈಕ್‌ನಲ್ಲಿ ಬರುವಾಗ ತಡೆಗೋಡೆಗೆ ಡಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.

ಪ್ರತಿನಿತ್ಯ ಚಂದಾಪುರ ಕಾಲೇಜಿಗೆ ಬರುವ ಧಾವಂತದಲ್ಲಿ ವಾಹನವನ್ನು ಹಿಂದಿಕ್ಕುವ ಆತುರದಲ್ಲಿ ಎತ್ತರಿಸಿದ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಹೊಸೂರು ಮೂಲದ ರಕ್ಷಿತ್ ಚಂದನ್(23) ಕೊನೆಯುಸಿರೆಳೆದಿದ್ದಾನೆ.

ಮೃತ ದುರ್ದೈವಿ ಚಂದಾಪುರದ ಲಾರ್ವಿನ್ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅತ್ತಿಬೆಲೆ ರಾಷ್ಟ್ರೀಯ ಹೆದ್ದಾರಿ-7ರ ಮೇಲ್ಸೇತುವೆ ಮೇಲೆ ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details