ಬೆಂಗಳೂರು: ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ ವಿರೋಧಿಸಿ ದಿನದಿಂದ ದಿನಕ್ಕೆ ಹೋರಾಟಗಳು ಹೆಚ್ಚಾಗುತ್ತಿದ್ದು, ನಾಡಿನಾದ್ಯಂತ ಪ್ರಕರಣ ಹೆಚ್ಚು ಕಾವು ಪಡೆದಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ ಪ್ರಕರಣ: ಕ್ಯಾಂಡಲ್ ಮಾರ್ಚ್ -
ವಕೀಲರು ಮತ್ತು ಅನೇಕ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಘಟನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಕ್ಯಾಂಡಲ್ ಮಾರ್ಚ್
ಹೀನ ಕೃತ್ಯದ ಬಗ್ಗೆ ರಾಜ್ಯದ ಜನರ ಆಕ್ರೋಶ ಹೆಚ್ಚಾಗುತ್ತಿದೆ. ನಗರದ ಟೌನ್ಹಾಲ್ ಮುಂಭಾಗ ಕ್ಯಾಂಡಲ್ ಬೆಳಗಿಸಿ ಅನೇಕ ಸಂಘಟನೆಗಳು ಶಾಂತಿ ಕೋರಿವೆ. ವಕೀಲರು ಮತ್ತು ಅನೇಕ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಘಟನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಿಯವರೆಗೂ ಪ್ರಶ್ನಿಸುವುದಿಲ್ಲವೊ ಅಲ್ಲಿಯವರೆಗೂ ಅನ್ಯಾಯಕ್ಕೆ ಕೊನೆಯಿಲ್ಲ, ಕಾನೂನಿನ ಜೊತೆ ಸಮಾಜವು ಕೂಡ ಧ್ವನಿಗೂಡಿಸಬೇಕು ಎಂದು ಹೋರಾಟಗಾರರು ಆಗ್ರಹ ಮಾಡಿದರು.