ನೆಲಮಂಗಲ: ಹುಡುಗನೊಂದಿಗೆ ಓಡಾಡುತ್ತಿದ್ದ ಮಗಳಿಗೆ ಪೋಷಕರು ಓದುವ ವಯಸ್ಸಿನಲ್ಲಿ ಪ್ರೀತಿ ಮಾಡಬೇಡ ಎಂದು ಬುದ್ಧಿಮಾತನ್ನ ಹೇಳಿದಕ್ಕೆ ಮನನೊಂದ ಯುವತಿ ನೇಣಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.
ಓದುವ ವಯಸ್ಸಿನಲ್ಲಿ ಪ್ರೀತಿ ಬೇಡ ಅಂದ ಪೋಷಕರು.. ನೆಲಮಂಗಲದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ - ವಿದ್ಯಾರ್ಥಿನಿ ನೇಣಿಗೆ ಶರಣು,
ಕಲಿಯುವ ವಯಸ್ಸಿನಲ್ಲಿ ಈ ಪ್ರೀತಿ ಪ್ರೇಮವೆಲ್ಲ ಯಾಕೆ, ಬಿಟ್ಟು ಬಿಡು ಎಂದು ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಹೆಸರಘಟ್ಟದಲ್ಲಿ ನಡೆದಿದೆ. ಮೃತ ಯುವತಿ ಕೇರಳ ಮೂಲದವಳು ಎಂದು ತಿಳಿದು ಬಂದಿದೆ.
ನೇಣಿಗೆ ಶರಣಾದ ಯುವತಿ
ಕೇರಳ ಮೂಲದ 19 ವರ್ಷದ ರಶ್ಮಿ(ಹೆಸರು ಬದಲಾಯಿಸಲಾಗಿದೆ) ಮೃತ ಯುವತಿ. ರಶ್ಮಿ ಹೆಸರಘಟ್ಟದ ಆಚಾರ್ಯ ಕಾಲೇಜ್ನಲ್ಲಿ ಮೊದಲ ವರ್ಷದ ಬಿಎ ವ್ಯಾಸಂಗ ಮಾಡುತ್ತ ಪಿಜಿಯಲ್ಲಿ ವಾಸವಾಗಿದ್ದಳು. ಈಕೆ ಯುವಕನೋರ್ವನ ಜೊತೆ ಸುತ್ತಾಡುತ್ತಿರುವ ವಿಷಯ ಆಕೆಯ ಪೋಷಕರಿಗೆ ತಿಳಿದಿತ್ತು. ಅದಕ್ಕಾಗಿ ಮಗಳಿಗೆ ಪ್ರೀತಿಯ ಕೂಪದಲ್ಲಿ ಬೀಳದಂತೆ ಬುದ್ಧಿ ಮಾತು ಹೇಳಿದ್ದರು ಎನ್ನಲಾಗ್ತಿದೆ.
ಇದರಿಂದ ಮನನೊಂದ ಯುವತಿ ಪಿಜಿ ರೂಮ್ನ ಫ್ಯಾನ್ಗೆ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.