ಬೆಂಗಳೂರು: ಇಲ್ಲಿನ ಮೂರು ಲೋಕಸಭಾ ಕ್ಷೇತ್ರಗಳ ಮೂರ ಸ್ಟ್ರಾಂಗ್ ರೂಂಗಳಿಗೆ ಜಿಲ್ಲಾ ಚುನಾವಣಾ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೌಂಟ್ ಕಾರ್ಮೆಲ್ ಕಾಲೇಜು, ಸೈಂಟ್ ಜೋಸೆಫ್ ಕಾಲೇಜು ಹಾಗೂ ಜಯನಗರದ ಎಸ್.ಎಸ್.ಎಂ.ಆರ್.ವಿ ಕಾಲೇಜುಗಳಿಗೆ ಭೇಟಿ ನೀಡಿ ಭದ್ರತೆ ಹಾಗೂ ಅಬ್ಸರ್ವರ್ ರೂಂಗಳ ಸಿಸಿಟಿವಿ ಫೂಟೇಜ್ ಪರಿಶೀಲಿಸಿದರು. ಬಳಿಕ ಮಾತನಾಡಿದ ಜಿಲ್ಲಾ ಚುನಾವಣಾ ಆಯುಕ್ತ ಮಂಜುನಾಥ್ ಪ್ರಸಾದ್, ಒಂದು ಸ್ಟ್ರಾಂಗ್ ರೂಂನಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳ ಇವಿಎಂ ಮಷಿನ್ ಹಾಗೂ ವಿವಿ ಪ್ಯಾಟ್ಗಳನ್ನ ಇಡಲಾಗಿದೆ.
ಮತ ಎಣಿಕೆ ದಿನ ಒಂದೊಂದು ಸೆಂಟರ್ನಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳ ಒಟ್ಟು ಎಂಟು ಕೊಠಡಿಗಳಲ್ಲಿ ಮತ ಎಣಿಕೆ ನಡೆಸಲಾಗುತ್ತದೆ. ಗರಿಷ್ಠ ಹದಿನೈದು ಟೇಬಲ್ಗಳು ಇರುತ್ತವೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್ ಮೇಲ್ವಿಚಾರಕರು ಇರ್ತಾರೆ.
ಪ್ರತೀ ಕೌಂಟಿಂಗ್ ಸೆಂಟರ್ನಲ್ಲೂ ಹದಿನೈದು ಟೇಬಲ್ಗಳಿದ್ದು, ಮೂರು ಚೇರ್ಗಳು ಇರುತ್ತವೆ. ಇವುಗಳಲ್ಲಿ ಮೈಕ್ರೋ ಅಬ್ಸರ್ವರ್, ಕೌಂಟಿಂಗ್ ಸೂಪರ್ ವೈಸರ್, ಕೌಂಟಿಂಗ್ ಅಸಿಸ್ಟೆಂಟ್ ಇರುತ್ತಾರೆ. ಅಲ್ಲದೆ ಕೌಂಟಿಂಗ್ ಸೆಂಟರ್ ಒಳಗೆ ಅಭ್ಯರ್ಥಿಗಳು ತಮ್ಮ ಕಡೆಯಿಂದ ಒಬ್ಬ ಏಜೆಂಟ್ ನೇಮಕ ಮಾಡಬಹುದು. ಎಲ್ಲ ಕೌಂಟಿಂಗ್ ಸೆಂಟರ್ಗಳಲ್ಲೂ ಸಿಸಿಟಿವಿ ಇರುತ್ತದೆ ಎಂದು ತಿಳಿಸಿದರು.
ಮೂರು ಸ್ಟ್ರಾಂಗ್ ರೂಂಗಳಿಗೆ ಜಿಲ್ಲಾ ಚುನಾವಣಾ ಆಯುಕ್ತ ಹಾಗೂ ನಗರ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ಇನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಪ್ರತೀ ವಿಧಾನಸಭಾ ಕ್ಷೇತ್ರಗಳ ಐದೈದು ವಿವಿ ಪ್ಯಾಟ್ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ, ವಿವಿ ಪ್ಯಾಟ್ಗಳ ಒಟ್ಟು ಫಲಿತಾಂಶಕ್ಕೂ, ವಿವಿ ಪ್ಯಾಟ್ ಸ್ಲಿಪ್ಗಳಿಗೂ ತಾಳೆ ಮಾಡಲಾಗುತ್ತದೆ. ಒಂದು ವೇಳೆ ತಾಳೆಯಾಗದಿದ್ದರೂ ವಿವಿ ಪ್ಯಾಟ್ ಸ್ಲಿಪ್ಗಳ ಫಲಿತಾಂಶವೇ ಅಂತಿಮ ಎಂದರು. ಅಲ್ಲದೆ ಇವಿಎಂಗಳಲ್ಲಿ ರಿಸಲ್ಟ್ ಬಾರದೇ ಇದ್ದರೂ ಆ ಮತಗಟ್ಟೆಯ ವಿವಿ ಪ್ಯಾಟ್ ಸ್ಲಿಪ್ಗಳನ್ನು ಕೌಂಟ್ ಮಾಡಲಾಗುವುದು. ಐದು ವಿವಿ ಪ್ಯಾಟ್ಗಳು ಯಾವುವು ಎಂದು ಅಭ್ಯರ್ಥಿಗಳ ಏಜೆಂಟ್ಗಳ ಸಮ್ಮುಖದಲ್ಲೇ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು ಎಂದರು.
ಅಲ್ಲದೆ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ 8 ರಿಂದ 11-30 ಒಳಗೆ ಇವಿಎಂಗಳ ಕೌಂಟಿಗ್ ಮುಗಿಯುತ್ತದೆ. ಆದರೂ ಅಂತಿಮ ಫಲಿತಾಂಶ ಘೋಷಣೆ ಸಂಜೆ ನಾಲ್ಕು ಗಂಟೆಯ ಮೇಲಾಗುತ್ತದೆ. ಅಲ್ಲಿಯವರೆಗೆ ರೌಂಡ್ ವೈಸ್ ಯಾರು ಮುನ್ನಡೆ, ಹಿನ್ನಡೆ ಹೇಳಲಾಗ್ತದೆ ಎಂದರು.
ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮಾತನಾಡಿ, ನಮ್ಮ ವ್ಯಾಪ್ತಿಗೆ ಮೂರು ಲೋಕಸಭಾ ಕ್ಷೇತ್ರಗಳ ಇವಿಎಂಗಳ ಜಬಾವ್ದಾರಿ ಇದೆ. ಮೂರು ಸುತ್ತಿನ ಭದ್ರತಾ ವ್ಯವಸ್ಥೆ ನೀಡಲಾಗಿದೆ. ಒಳಗಡೆ ಪ್ಯಾರಾಮೀಟರ್ನಲ್ಲಿ ಕೇಂದ್ರ ಮೀಸಲು ಪಡೆ, ಎರಡನೇ ಸುತ್ತಿನಲ್ಲಿ ರಾಜ್ಯದ ಸೆಕ್ಯೂರಿಟಿ, ಮೂರನೇ ಸುತ್ತಿನಲ್ಲಿ ಸಿವಿಲ್ ಪೊಲೀಸರು ಭದ್ರತೆ ನೀಡುತ್ತಿದ್ದಾರೆ. 130ರಿಂದ 135 ಜನ ಸಿವಿಲ್ ಪೊಲೀಸರು ಪ್ರತಿ ದಿನ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇ 23ನೇ ದಿನದ ಕೌಂಟಿಂಗ್ ಭದ್ರತಾ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಮಾಡಲಾಗುತ್ತೆ ಎಂದರು.