ಬೆಂಗಳೂರು: 'ಪಾದರಾಯನಪುರ ಸೀಲ್‌ಡೌನ್' ಎಂದು ಘೋಷಿಸಿದ್ದರೂ ಜನರು ಅನಗತ್ಯವಾಗಿ ಮನೆಯಿಂದ ಹೊರಬರುತ್ತಲೇ ಇದ್ದಾರೆ. ಇದರ ಜೊತೆಗೆ ನಕಲಿ ಪಾಸ್ ಹೆಸರಿನಲ್ಲಿ ಓಡಾಟ ನಡೆಸುತ್ತಿರುವುದು ಕೊರೊನಾಗೆ ಆಹಾರವಾಗುವ ಆತಂಕ ಹೆಚ್ಚಿಸುತ್ತಿದೆ.
ಪಾದರಾಯನಪುರದಲ್ಲಿ ಜನರ ಅನಗತ್ಯ ಓಡಾಟ: ಸೀಲ್‌ಡೌನ್ ನಿಯಮ ಮತ್ತಷ್ಟು ಬಿಗಿ - vehicle seized by police
ಪಾದರಾಯನಪುರದಲ್ಲಿ ನಕಲಿ ಪಾಸ್ಗಳನ್ನು ವಾಹನಗಳಿಗೆ ಅಂಟಿಸಿಕೊಂಡು ಓಡಾಡುತ್ತಿರುವ ವಾಹನಗಳನ್ನು ಪೊಲಿಸರು ಸೀಜ್ ಮಾಡುತ್ತಿದ್ದಾರೆ.
![ಪಾದರಾಯನಪುರದಲ್ಲಿ ಜನರ ಅನಗತ್ಯ ಓಡಾಟ: ಸೀಲ್‌ಡೌನ್ ನಿಯಮ ಮತ್ತಷ್ಟು ಬಿಗಿ seal down](https://etvbharatimages.akamaized.net/etvbharat/prod-images/768-512-7123939-260-7123939-1589007985470.jpg)
seal down
ಜನರು ಮನೆಯಿಂದ ಹೊರಬರುವುದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಪಾದರಾಯನಪುರ ಮುಖ್ಯದ್ವಾರದಲ್ಲಿ ವಾಹನಗಳ ಓಡಾಟ ಹೆಚ್ಚಾಗುತ್ತಿದೆ. ಇದೇ ವೇಳೆ ಜನರನ್ನು ಮನವೊಲಿಸಿ ಪೊಲೀಸರು ಮನೆಗೆ ಕಳುಹಿಸುತ್ತಿದ್ದಾರೆ.
ಪಾದರಾಯನಪುರದಲ್ಲಿ ಸೀಲ್ ಡೌನ್ ಬಿಗಿಗೊಳಿಸಿದ ಪೊಲೀಸರು
ವಾಹನಗಳ ಮೇಲೆ ನಕಲಿ ಪಾಸ್ಗಳನ್ನು ಹಾಕಿಕೊಂಡು ಓಡಾಡುತ್ತಿದ್ದವರ ವಾಹನಗಳನ್ನ ಸೀಜ್ ಮಾಡಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಹೊಸದಾಗಿ ಎರಡು ಸೋಂಕಿತ ಪ್ರಕರಣಗಳು ಕಾಣಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಸೀಲ್‌ಡೌನ್ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.