ಬೆಂಗಳೂರು: ಕೊರೊನಾ ತಡೆಗಟ್ಟಲು ಇಂದು ಕರ್ಫ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ಸಿಲಿಕಾನ್ ಸಿಟಿಯ ಬಹುತೇಕ ಕಡೆ ಅನಗತ್ಯ ಸಂಚಾರ ಮಾಡಿದ್ದು ಕಂಡುಬಂದರೆ ಪೊಲೀಸರು ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.
ಬೆಂಗಳೂರಿಗರೇ ಎಚ್ಚರ: ರೋಡಿಗಿಳಿದ್ರೆ ನಿಮ್ಮ ವಾಹನ ಸೀಜ್
ಬೆಂಗಳೂರು ನಗರದಲ್ಲಿ ಅನಗತ್ಯವಾಗಿ ಓಡಾಟ ಮಾಡಿದರೆ ಅಂತವರನ್ನ ಪೊಲೀಸರು ಹಿಡಿದು (NDMA)ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರ ವಾಹನಗಳನ್ನು ಜಪ್ತಿ ಮಾಡ್ತಿದ್ದಾರೆ.
ಬೆಂಗಳೂರಲ್ಲಿ ರೋಡಿಗಿಳಿದ್ರೆ ನಿಮ್ಮ ವಾಹನ ಸೀಜ್
ನಗರದ ಬಹುತೇಕ ಸಿಗ್ನಲ್ಗಳ ಬಳಿ ಟ್ರಾಫಿಕ್ ಪೊಲೀಸರು ಹಾಗೂ ಖಾಕಿ ಸಿಬ್ಬಂದಿ ಮೊಕ್ಕಂ ಹೊಡಿದ್ದು, ರಸ್ತೆಗಳಲ್ಲಿ ಬರುವ ವಾಹನ ಹಾಗೂ ಅನಗತ್ಯವಾಗಿ ಓಡಾಟ ಮಾಡುವವರನ್ನ ತಡೆದು ತಪಾಸಣೆ ನಡೆಸ್ತಿದ್ದಾರೆ.
ಒಂದು ವೇಳೆ ಅನಗತ್ಯವಾಗಿ ಓಡಾಟ ಮಾಡಿದರೆ ಅಂತವರನ್ನ ಪೊಲೀಸರು ಹಿಡಿದು (NDMA)ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಾಹನಗಳನ್ನು ಜಪ್ತಿ ಮಾಡ್ತಿದ್ದಾರೆ.ಮತ್ತೊಂದೆಡೆ ಹೊಯ್ಸಳ ಸಿಬ್ಬಂದಿ ಕೂಡ ಗಸ್ತು ತಿರುಗುತ್ತಿದ್ದು, ಅನಗತ್ಯ ಓಡಾಡುವರನ್ನು ಮನೆಗೆ ತೆರಳುವಂತೆ ಸೂಚಿಸುತ್ತಿದ್ದಾರೆ.