ಬೆಂಗಳೂರು:ನಗರದಲ್ಲಿ ಬೀದಿನಾಯಿಗಳು ಪುಟ್ಟ ಬಾಲಕನ ಮೇಲೆ ದಾಳಿಗೆ ಮುಂದಾಗಿದ್ದು, ಸುತ್ತಮುತ್ತಲಿನ ಜನರ ಸಹಾಯದಿಂದ ಪಾರದ ಘಟನೆ, ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಮ್ಮ ದೇವಾಲಯದ ಬಳಿ ನಡೆದಿದೆ.
ಆಟವಾಡುತ್ತಿದ್ದ ಬಾಲಕನ ಮೇಲೆ ಮುಗಿಬಿದ್ದ ಬೀದಿ ನಾಯಿಗಳು: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಪುಟ್ಟ ಬಾಲಕನ ಬೆನ್ನಟ್ಟಿ ಬಂದ ನಾಯಿಗಳು
ನಗರದಲ್ಲಿ ಬೀದಿನಾಯಿಗಳ ಅಟ್ಟಹಾಸ ಮುಂದುವರೆದಿದೆ. ಮನೆ ಮುಂಭಾಗ ಆಟವಾಡುತಿದ್ದ ಪುಟ್ಟ ಬಾಲಕನ ಬೆನ್ನಟ್ಟಿ ಬಂದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ

ಬೀದಿ ನಾಯಿಗಳು
ಕೆಲ ದಿನಗಳ ಹಿಂದೆ ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಮೂರು ಬೀದಿನಾಯಿಗಳು ಕಚ್ಚಲು ಮುಂದಾಗಿವೆ. ಈ ವೇಳೆ, ಬಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬೀದಿನಾಯಿಗಳು ಅಟ್ಟಹಾಸ ಮೆರೆಯಲು ಮುಂದಾಗಿದ್ದವು. ಅದೃಷ್ಟವಶಾತ್ ಸ್ಥಳೀಯರು ಇದನ್ನು ಕಂಡು ಬೀದಿನಾಯಿಗಳನ್ನು ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ.
ಬಾಲಕನ ಮೇಲೆ ದಾಳಿಗೆ ಮುಂದಾಗಿದ್ದ ಬೀದಿ ನಾಯಿಗಳು
ಬೀದಿನಾಯಿಗಳು ಅಟ್ಟಹಾಸ ಮೆರೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲವು ಬಾರಿ ಬಿಬಿಎಂಪಿಗೆ ಮನವಿ ಮಾಡಿದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಮನೆಯಿಂದ ಹೊರ ಹೋಗಬೇಕಾದರೆ ಇಲ್ಲಿನ ಜನ ಆತಂಕದಲ್ಲೇ ಮುಂದೆ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.