ಆನೇಕಲ್:ಇಲ್ಲಿನ ಚಂದಾಪುರ- ಆನೇಕಲ್ ಮುಖ್ಯ ರಸ್ತೆ ಪಕ್ಕದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಪುರಸಭೆ ಮುಂದಾಗಿದ್ದು, ಇದನ್ನು ಖಂಡಿಸಿ ಸಣ್ಣ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.
ಚಂದಾಪುರ-ಆನೇಕಲ್ ಮುಖ್ಯ ರಸ್ತೆಯ ಪಕ್ಕದಲ್ಲಿರುವ ವ್ಯಾಪಾರಿಗಳ ಮೇಲೆ ಪುರಸಭೆ ಏಕಾಏಕಿ ಜೆಸಿಬಿಗಳ ಮೂಲಕ ಬದುಕನ್ನು ಕಸಿದು ಬೀದಿಗೆ ತಳ್ಳಿವೆ. ಸಾಕಷ್ಟು ಕಿರುಕುಳಗಳ ನಡುವೆಯೂ ಅರೆ ಹೊಟ್ಟೆಗೆ ಗಂಜಿ ಸಂಪಾದಿಸುತ್ತಿದ್ದವರಿಗೆ ಇದೀಗ ಪುರಸಭೆ ಶಾಕ್ ನೀಡಿದ್ದು, ಪುರಸಭೆ ಅಧಿಕಾರಿಗಳು ಫುಟ್ಪಾತ್ ಒತ್ತುವರಿ ಎಂಬ ಕಾರಣಗಳನ್ನು ಹೇಳಿ ರಸ್ತೆ ಪಕ್ಕದಲ್ಲಿರುವ ಸಣ್ಣ ಸಣ್ಣ ವ್ಯಾಪಾರ ಮಾಡುವ ಅಂಗಡಿಗಳ ತೆರವಿಗೆ ಮುಂದಾಗಿದೆ.