ಆನೇಕಲ್: ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಕಾರ್ಮೋಡ ಕವಿದ ವಾತಾವರಣವಿದ್ದು, ಭಾರೀ ಬಿರುಗಾಳಿ ಬೀಸುತ್ತಿದೆ. ಇನ್ನೇನು ಮುಂಗಾರು ಆರಂಭಗೊಳ್ಳುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ರಾಗಿ ಕಣಜದ ರೈತರಿಗೆ ಇದರಿಂದ ಸ್ವಲ್ಪ ನಿರಾಸೆ ಉಂಟಾಗಿದೆ ಎನ್ನಲಾಗುತ್ತಿದೆ.
ಆನೇಕಲ್ ಸುತ್ತಮುತ್ತ ಭಾರೀ ಬಿರುಗಾಳಿ: ನೆಲಕ್ಕುರುಳಿದ ತೆಂಗಿನಮರಗಳು
ಆನೇಕಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಭಾರೀ ಬಿರುಗಾಳಿ ಬೀಸಿದ್ದು ಹಲವು ತೆಂಗಿನ ಮರಗಳು ನೆಲಕ್ಕುರುಳಿವೆ.
ಆನೇಕಲ್ ಸುತ್ತಲಿನ ಪ್ರದೇಶದಲ್ಲಿ ಬಿರುಗಾಳಿ
ಇನ್ನು ಪಟ್ಟಣದಲ್ಲಿ ಬೀಸಿದ ಭಾರೀ ಬಿರುಗಾಳಿಗೆ ಹಲವು ತೆಂಗಿನಮರಗಳು ನೆಲಕ್ಕುರುಳಿದ್ದು, ರಾಜ್ಯದಾದ್ಯಂತ ಭಾನುವಾರ (ಮೇ 24) ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿ ಇರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.