ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಸಂಚಾರ ವಿಭಾಗದ ಅಧಿಕಾರಿಗಳು, ಸಿಬ್ಬಂದಿಯ ಸುರಕ್ಷತಾ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಕಳೆದ 2020ನೇ ಸಾಲಿನ ಮಾರ್ಚ್ ತಿಂಗಳಿನಿಂದ ಮದ್ಯಪಾನ ಸೇವಿಸಿ ವಾಹನ ಚಲಾಯಿಸುತ್ತಿದ್ದವರ ವಿರುದ್ಧ ದೂರು ದಾಖಲಿಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಇದೀಗ ಕೋವಿಡ್ ಮಾರ್ಗಸೂಚಿಗಳೊಂದಿಗೆ ಅದನ್ನು ಮತ್ತೆ ಮುಂದುವರಿಸಲು ನಿರ್ಧರಿಸಲಾಗಿದೆ.
ಮಾರಣಾಂತಿಕ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡುವುದು ಅನಿವಾರ್ಯವಾಗಿದ್ದು, ಅಪಘಾತಗಳು ತಡೆಗಟ್ಟುವ ದೃಷ್ಟಿಯಿಂದ ಕಾರ್ಯವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಪೋಲಿಸ್ ಇಲಾಖೆ ತಿಳಿಸಿದೆ.
* ಸ್ಯಾನಿಟೈಸ್ ಆದ ಅಲ್ಲೋಮೀಟರ್‌ಗಳನ್ನು ಪ್ರತ್ಯೇಕ ಜಿಪ್ ಲಾಕ್ ಕವರ್ನಲ್ಲಿರಿಸಿ, ಒಬ್ಬರಿಗೆ ಉಪಯೋಗಿಸಿದ ನಂತರ ಅದೇ Zip Lock Cover ನಲ್ಲಿ ಪ್ರತ್ಯೇಕವಾಗಿರಿಸಲು ಕ್ರಮ ಕೈಗೊಳ್ಳಲಾಗಿದೆ.
* ಸಂಭಾಷಣೆ ಮಾಡುವಾಗ ಒಂದು ಉಪಕರಣವನ್ನು ಕೇವಲ ಒಬ್ಬರಿಗೆ ಒಂದು ಬಾರಿ ಮಾತ್ರ ಉಪಯೋಗಿಸಲಾಗುವುದು.
* ಸಂಭಾಷಣೆ ಮಾಡುವಾಗ ಒಂದು ಉಪಕರಣವನ್ನು ಕೇವಲ ಒಬ್ಬರಿಗೆ ಒಂದು ಬಾರಿ ಮಾತ್ರ ಉಪಯೋಗಿಸಲಾಗುವುದು.
* ಚಾಲಕ-ಸವಾರರ ತಪಾಸಣೆಯನ್ನು ನಡೆಸುವ ವೇಳೆ ಪ್ರತಿಯೊಬ್ಬರಿಗೂ ಪ್ರತ್ಯೇಕ ಸ್ಟ್ರಾ ಉಪಯೋಗಿಸಲಾಗುವುದು.
* ತಪಾಸಣೆ ಮಾಡುವ ಪ್ರತಿಯೊಬ್ಬ ಸಿಬ್ಬಂದಿಯು ಹ್ಯಾಂಡ್‌ಗ್ಲೌಸ್, ಮಾಸ್ಕ್ ಮತ್ತು ಫೇಸ್ ಶೀಲ್ಡ್ ಬಳಸುವುದರ ಜೊತೆಗೆ ಪ್ರತಿ ಬಾರಿಯೂ ತಪಾಸಣೆ ಮಾಡಿದ ನಂತರ ಹ್ಯಾಂಡ್ ಸ್ಯಾನಿಟೈಸ್ ಮಾಡಲು ತಿಳಿಸಲಾಗಿದೆ.
* ಬಳಸಿದ ಉಪಕರಣವನ್ನು ಸಾನಿಟೈಸ್ ಮಾಡಿ ಕನಿಷ್ಠ 3 ದಿನಗಳ ಮಟ್ಟಿಗೆ ಉಪಯೋಗಿಸದಂತೆ ಕ್ರಮ ವಹಿಸಲು ಸೂಚಿಸಲಾಗಿದೆ.
* ತಪಾಸಣೆ ಮಾಡುವಾಗ ಚಾಲಕರ - ಸವಾರರ ಮುಂದೆ ಪ್ರತಿ ಬಾರಿಯು ಸ್ಯಾನಿಟೈಸ್ ಮಾಡಿಕೊಳ್ಳುವ ಮೂಲಕ ಶುಚಿತ್ವವನ್ನು ಕಾಪಾಡಿಕೊಳ್ಳಲು ಮನವರಿಕೆ ಮಾಡಿಕೊಡಲಾಗುತ್ತದೆ.
* ತಪಾಸಣೆ ಕಾರ್ಯವನ್ನು ಯೋಜನಾಬದ್ಧವಾಗಿ ಕೋವಿಡ್-19ರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
* ತಪಾಸಣೆ ಕಾರ್ಯವನ್ನು ಯೋಜನಾಬದ್ಧವಾಗಿ ಕೋವಿಡ್-19ರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.