ಕರ್ನಾಟಕ

karnataka

ETV Bharat / state

ಕೆಎಸ್ಆರ್​​ಟಿಸಿ ಬಸ್​​ಗೆ ಕಲ್ಲು: ಕಾಂಗ್ರೆಸ್ ಪ್ರತಿಭಟನಾಕಾರರಿಂದ ಕೃತ್ಯ - ಯುವ ಕಾಂಗ್ರೆಸ್ ಕಾರ್ಯಕರ್ತರು

ಬೆಂಗಳೂರಿನ ಆನಂದರಾವ್ ವೃತ್ತ ಸಮೀಪದ ಕಾಂಗ್ರೆಸ್ ಭವನ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಬಸ್​ಗೆ ಕಲ್ಲು ತೂರಿದ್ದಾರೆ. ಮೌರ್ಯ ವೃತ್ತದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ಸಂದರ್ಭ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.

ಕೆಎಸ್ಆರ್​​ಟಿಸಿ ಬಸ್​​ಗೆ ಕಲ್ಲು

By

Published : Sep 4, 2019, 2:53 PM IST

ಬೆಂಗಳೂರು: ನಗರದಿಂದ ಗೌರಿಬಿದನೂರಿನ ಕಡೆ ಹೊರಟಿದ್ದ ಕೆಎಸ್ಆರ್​​ಟಿಸಿ ಬಸ್​ಗೆ ಕಾಂಗ್ರೆಸ್​​ ಕಾರ್ಯಕರ್ತರು ಕಲ್ಲು ತೂರಿದ್ದಾರೆ.

ಬೆಂಗಳೂರಿನ ಆನಂದರಾವ್ ವೃತ್ತ ಸಮೀಪದ ಕಾಂಗ್ರೆಸ್ ಭವನ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಬಸ್​ಗೆ ಕಲ್ಲು ತೂರಿದ್ದಾರೆ. ಮೌರ್ಯ ವೃತ್ತದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ಸಂದರ್ಭ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.

ಕೆಎಸ್ಆರ್​​ಟಿಸಿ ಬಸ್​​ಗೆ ಕಲ್ಲು ತೂರಿದ ಕಾರ್ಯಕರ್ತರು

ಗೌರಿಬಿದನೂರು ಡಿಪೋಗೆ ಸೇರಿದ ಕೆಎ 40 ಎಫ್ 1334 ಸಂಖ್ಯೆಯ ಬಸ್ ಗೌರಿಬಿದನೂರಿನತ್ತ ತೆರಳುತ್ತಿತ್ತು. ಬಸ್​​ನಲ್ಲಿ ಐವರು ಪ್ರಯಾಣಿಕರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಯಾರನ್ನು ಬಂಧಿಸಿಲ್ಲ. ಬಸ್ ಮುಂಭಾಗದ ಗಾಜು ಒಡೆದಿದ್ದು ಪ್ರಯಾಣಿಕರನ್ನು ತಕ್ಷಣವೇ ಇಳಿಸಿ ಬೇರೆ ವಾಹನದಲ್ಲಿ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಕಲ್ಲೇಟು ಬಿದ್ದ ಬಸ್​​​ನ ಅಧಿಕಾರಿಗಳ ವೀಕ್ಷಣೆಯ ನಂತರ ಕೆಎಸ್ಆರ್​​ಟಿಸಿ ಬಸ್ ಘಟಕಕ್ಕೆ ಕಳುಹಿಸಿಕೊಡಲಾಯಿತು.

ABOUT THE AUTHOR

...view details