ಬೆಂಗಳೂರು:ಕರ್ನಾಟಕ ಬಸ್ಗೆ ಮಹಾರಾಷ್ಟ್ರದಲ್ಲಿ ಕಲ್ಲು ತೂರಾಟ, ಮಸಿ ಬಳಿಯುವ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆ ಈ ಕುರಿತು ರಾಜ್ಯದ ಬಸ್ಗಳಿಗೆ ರಕ್ಷಣೆ ನೀಡುವಂತೆ ಕೋರಿ ಮಹರಾಷ್ಟ್ರ ಗೃಹ ಇಲಾಖೆಗೆ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಮನವಿ ಮಾಡಿದ್ದಾರೆ.
ರಾಜ್ಯ ಬಸ್ಗಳಿಗೆ ಹಾನಿ ನಡೆಸುವ ಪ್ರಕರಣ ನಡೆದಿರುವ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಯಿ ಅವರ ಸೂಚನೆ ಮೇರೆಗೆ ಮಹಾರಾಷ್ಟ್ರ ಗೃಹ ಇಲಾಖೆ ಕಾರ್ಯದರ್ಶಿಗೆ ಜತೆ ಎಸಿಎಸ್ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಮಹಾರಾಷ್ಟ್ರದ ಕರ್ನಾಟಕ ಮೂಲದ ನಿವಾಸಿಗಳು, ಅವರ ಆಸ್ತಿಪಾಸ್ತಿ, ರಾಜ್ಯದ ಬಸ್ಗಳಿಗೆ ರಕ್ಷಣೆ ನೀಡಬೇಕು.