ಕರ್ನಾಟಕ

karnataka

ETV Bharat / state

ವಿದೇಶಿ ವ್ಯಕ್ತಿ ಬೈಕ್​ನಲ್ಲಿ ಕಳ್ಳತನ... ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ಓಲಾ ಕ್ಯಾಬ್​ ಚಾಲಕ! - stolen in foreign man bike at bangalore,

ವಿದೇಶಿ ವ್ಯಕ್ತಿ ಬೈಕ್​ನಲ್ಲಿ ಕಳ್ಳತನ ಮಾಡಿರುವ ಕ್ಯಾಬ್​ ಚಾಲಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ಓಲಾ ಕ್ಯಾಬ್​ ಚಾಲಕ

By

Published : Sep 17, 2019, 2:03 PM IST

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಳ್ಳರ ಕೃತ್ಯ ಬೆಳಕಿಗೆ ಬಂದಿದೆ. ವಿದೇಶಿ ವ್ಯಕ್ತಿ ಬೈಕ್​ನಲ್ಲಿ ಕಳ್ಳತನ ಮಾಡಿರುವ ಕ್ಯಾಬ್​ ಚಾಲಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.

ರೆನಿಟೂ ಬೆಟಿಸ್ಟಾ ಎಂಬ ವಿದೇಶಿ ವ್ಯಕ್ತಿ ಹೆಬ್ಬಾಳ ಬಳಿ ಇರುವ ಅರಮನೆ ಮೈದಾನದ ಪಾರ್ಕಿಂಗ್​ನಲ್ಲಿ ತನ್ನ ಬೈಕ್ ನಿಲ್ಲಿಸಿದ್ದರು. ಬಳಿಕ ಜಪಾನ್ ಮೂಲದ ಕಾರ್ಯಕ್ರಮಕ್ಕೆ ಬಾಣಸಿಗನಾಗಿ ತೆರಳಿದ್ದರು.

ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ಓಲಾ ಕ್ಯಾಬ್​ ಚಾಲಕ

ಅರಮನೆ ಮೈದಾನದ ಪಾರ್ಕಿಂಗ್​ನಲ್ಲಿ ಬೈಕ್ ನಿಲ್ಲಿಸಿದ್ದನ್ನು ಓಲಾ ಕ್ಯಾಬ್​ ಚಾಲಕ ಗಮನಿಸಿದ್ದಾನೆ. ಬೈಕ್​ ಡಿಕ್ಕಿಯಲ್ಲಿ ಇಟ್ಟಿದ್ದ 20 ಸಾವಿರ ನಗದು, ಅಂತಾರಾಷ್ಟ್ರೀಯ ಡಿಎಲ್ ಹಾಗೂ 10 ಸಾವಿರ ಮೌಲ್ಯದ ಸನ್ ಗ್ಲಾಸ್​ನ್ನು ಎಗರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಬಾಣಸಿಗ ಕೆಲಸ ಮುಗಿಸಿ ಹೊರ ಬಂದು ನೋಡಿದಾಗ ಕಳ್ಳತನ ವಿಚಾರ ತಿಳಿದು ಬಂದಿದೆ. ತಕ್ಷಣ ಅಲ್ಲಿನ ಸಿಸಿಟಿವಿ ದೃಶ್ಯ ನೋಡಿದಾಗ ಓಲಾ ಕ್ಯಾಬ್ ಚಾಲಕ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. KA 03 AC 4413 ಕ್ಯಾಬ್​ನಲ್ಲಿ ಬಂದ ಚಾಲಕ ಕೃತ್ಯ ವೆಸಗಿದ್ದು ತಿಳಿದುಬಂದಿದೆ.

ಇನ್ನೂ ಈ ಘಟನೆ ಕುರಿತು ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details