ಕರ್ನಾಟಕ

karnataka

ETV Bharat / state

ಆಟೋ-ಕ್ಯಾಬ್​​ ಚಾಲಕರ ದುಡಿಮೆಗೆ ಕೊಡಲಿ ಪೆಟ್ಟು - ಆಟೋ, ಟ್ಯಾಕ್ಸಿ ಚಾಲಕರ ಸಂಕಷ್ಟ

ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆಯಲ್ಲೂ ಭಾರಿ ಇಳಿಕೆ ಕಂಡಿದ್ದು, ವಿಮಾನ ನಿಲ್ದಾಣದಿಂದ ನಗರದ ಕಡೆ ಪ್ರಯಾಣ ಬೆಳೆಸುತ್ತಿದ್ದವರ ಸಂಚಾರ ವಿರಳವಾದ ಹಿನ್ನೆಲೆಯಲ್ಲಿ ಆಟೋ, ಟ್ಯಾಕ್ಸಿ ಚಾಲಕರ ಸಂಕಷ್ಟ ದುಪ್ಪಟ್ಟಾಗಿದೆ.

still Auto and taxi drivers facing hardship
ಆಟೋ ಚಾಲಕರಿಗೆ ಸಂಕಷ್ಟ

By

Published : Dec 30, 2020, 4:39 PM IST

ಬೆಂಗಳೂರು: ಸತತ 9 ತಿಂಗಳಿಂದ ಐಟಿ-ಬಿಟಿ ಸಂಸ್ಥೆಗಳು ನೌಕರರಿಗೆ ನೀಡಿರುವ ವರ್ಕ್ ಫ್ರಮ್ ಹೋಮ್​ನಿಂದಾಗಿ ಅವರ ಮೇಲೆಯೇ ಅವಲಂಬಿತರಾಗಿದ್ದ ಆಟೋ, ಟ್ಯಾಕ್ಸಿ ಚಾಲಕರ ದಿನನಿತ್ಯದ ದುಡಿಮೆಯಲ್ಲಿ ಶೇ. 50ರಷ್ಟು ಇಳಿಕೆ ಕಾಣುವ ಜೊತೆಗೆ ಸಾಲದ ಹೊರೆಯೂ ಹೆಚ್ಚಾಗಿದೆ.

ಇದನ್ನೂ ಓದಿ...ಸಾರಿಗೆ ನೌಕರರ ಮುಷ್ಕರದ ಮುಂದಾಳತ್ವ ವಹಿಸಿದ್ದ ಸಿಬ್ಬಂದಿ ವಜಾ!

ಓಲಾ-ಉಬರ್ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ತನ್ವಿರ್ ಪಾಷಾ ಮಾತನಾಡಿ, ಬಹುತೇಕ ಚಾಲಕರು ಸಾಲದ ಮೇಲೆ ಕಾರುಗಳನ್ನು ಖರೀದಿಸಿದ್ದಾರೆ. 6 ತಿಂಗಳ ಮಾರಿಟೋರಿಯಂ ಅವಧಿ ಕೂಡ ಮುಗಿದಿದೆ. ಈಗ ಅವರು ಸಾಲದ ಕಂತು ಪಾವತಿಸಲು ಹೆಣಗಾಡುತ್ತಿದ್ದಾರೆ ಎಂದರು.

ಓಲಾ-ಉಬರ್ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ

ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ 2ನೇ ದರ್ಜೆ ನಗರಗಳಲ್ಲೂ ಟ್ಯಾಕ್ಸಿ-ಆಟೋ ಚಾಲಕರಿಗೆ ತೀವ್ರ ಹೊಡೆತ ಬಿದ್ದಿದೆ. ಇತ್ತ ಪ್ರವಾಸೋದ್ಯಮಕ್ಕೂ ಜನರ ಆಗಮನ ಅಷ್ಟಕ್ಕಷ್ಟೇ ಆಗಿದೆ. ಒಂದು ವೇಳೆ ಬಂದರೂ ಸ್ವಂತ ವಾಹನಗಳ ಮೂಲಕ ಬರುತ್ತಾರೆ. ಇದು ಆಟೋ, ಟ್ಯಾಕ್ಸಿ ಚಾಲಕರ ಸಂಪಾದನೆಗೆ ಅಡ್ಡಿಯಾಗಿದೆ.

ABOUT THE AUTHOR

...view details