ಕರ್ನಾಟಕ

karnataka

ETV Bharat / state

ಬೆಂಗಳೂರು ಮೆಟ್ರೋದಲ್ಲಿದೆ ಉದ್ಯೋಗಾವಕಾಶ: 236 ಹುದ್ದೆಗಳಿಗೆ ಅರ್ಜಿ ಆಹ್ವಾನ - ಸೆಕ್ಷನ್​ ಇಂಜಿನಿಯರ್​​​ ಮತ್ತು ಟ್ರೈನ್​ ಆಪರೇಟರ್​

ಬೆಂಗಳೂರು ಮೆಟ್ರೋದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.

Station Control and Maintainer  Job Vacancy in Bangalore Metro
Station Control and Maintainer Job Vacancy in Bangalore Metro

By

Published : Mar 24, 2023, 10:48 AM IST

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೆಕ್ಷನ್​ ಇಂಜಿನಿಯರ್​​​ ಮತ್ತು ಟ್ರೈನ್​ ಆಪರೇಟರ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಉಳಿಕೆ ಮೂಲ ವೃಂದದ ಅಡಿಯಲ್ಲಿ ಒಟ್ಟು 236 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಅಧಿಸೂಚನೆ

ಹುದ್ದೆಗಳ ವಿವರ: ಸೆಕ್ಷನ್​ ಇಂಜಿನಿಯರ್​, ಮೇಂಟೇನರ್​ ಮತ್ತು ಸ್ಟೇಷನ್​ ಕಂಟ್ರೋಲರ್​, ಟ್ರೈನ್​ ಆಪರೇಟರ್​ ಸೇರಿದಂತೆ ಒಟ್ಟು 236 ಹುದ್ದೆಗಳಿಗೆ ನೇಮಕಾತಿ. 29 ಹುದ್ದೆಗಳು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲು.

ವೇತನ: ವಿವಿಧ ಹುದ್ದೆಗಳ ಶ್ರೇಣಿಗೆ ಅನುಸಾರವಾಗಿ ಮಾಸಿಕ 25000 ದಿಂದ 94500 ರೂವರೆಗೆ ವೇತನ ನಿಗದಿಸಲಾಗಿದೆ.

ವಿದ್ಯಾರ್ಹತೆ: ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯದಿಂದ ಬಿಇ, ಬಿ.ಟೆಕ್​ನಲ್ಲಿ ಸಿವಿಲ್​ ಇಂಜಿನಿಯರಿಂಗ್​ ಪದವಿ, ಐಟಿಐ ಮತ್ತು ಡಿಪ್ಲೊಮಾ ಪದವಿ ಹೊಂದಿರಬೇಕು.

ವಯೋಮಿತಿ: ಕನಿಷ್ಟ 18 ವರ್ಷ ಗರಿಷ್ಠ 35 ವರ್ಷ ಮೀರಿರಬಾರದು. ಪ್ರವರ್ಗ 23, 2ಬಿ, 3ಎ ಮತ್ತು 3ಬಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ ವಿಧಾನ:ಬಿಎಂಆರ್​ಸಿಎಲ್​ನಲ್ಲಿ ಪ್ರಕಟವಾಗಿರುವ ಅಧಿಕೃತ ಅರ್ಜಿಯಲ್ಲಿ ಆನ್​ಲೈನ್​ ಮೂಲಕವೇ ಅರ್ಜಿ ಸಲ್ಲಿಸತಕ್ಕದು. ನಿಬಂಧನೆಗಳನ್ನು ಸರಿಯಾಗಿ ಪರಿಶೀಲಿಸಬೇಕು. ಅರ್ಜಿ ಶುಲ್ಕವನ್ನು ಆನ್​ಲೈನ್​ ಮತ್ತು ಚಲನ್​ ಮೂಲಕ ಪಾವತಿಸಬಹುದು. ಸಾಮಾನ್ಯ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 1,180, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 590 ರೂ ಜೊತೆಗೆ ಶೇ 18 ಜಿಎಸ್​ ಅನ್ವಯ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆಯ ಬಳಿಕ ಮೆರಿಟ್​ ಆಧಾರದ ಮೇಲೆ ಸಂದರ್ಶನ.

ಮಾರ್ಚ್​ 24ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್​ 24 ಕಡೆಯ ದಿನಾಂಕ. ಅರ್ಜಿ ಶುಲ್ಕ ಪಾವತಿಗೆ ಏಪ್ರಿಲ್​ 27 ಅಂತಿಮ ದಿನ.

ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ವಿವರ ಪಡೆಯಲು ಬಿಎಂಆರ್​ಸಿಎಲ್​ನ ಅಧಿಕೃತ ಜಾಲತಾಣ https://kannada.bmrc.co.in/#/career ಅಥವಾ english.bmrc.co.in ಗೆ ಭೇಟಿ ನೀಡಿ.

ಇದನ್ನೂ ಓದಿ: ಇಗ್ನೋದಲ್ಲಿ ಉದ್ಯೋಗಾವಕಾಶ.. 200 ಟೈಪಿಸ್ಟ್​ ಹುದ್ದೆಗೆ ಅರ್ಜಿ ಆಹ್ವಾನ

ABOUT THE AUTHOR

...view details