ಬೆಂಗಳೂರು:ಪರಿಸರ ಉಳಿಸಿದರೆ ದೇಶವೂ ಉಳಿದಂತೆ. ಹೀಗಾಗಿ ನಾನು ಹೇಗೆ ಗಿಡ, ಮರ ಬೆಳೆಸಿದೆನೊ ಹಾಗೇ ವಯಸ್ಸಿನ ಭೇದ-ಭಾವವಿಲ್ಲದೇ ಚಿಕ್ಕವರು-ದೊಡ್ಡವರು ಎಲ್ಲರೂ ಗಿಡ ಮರಗಳನ್ನ ಬೆಳೆಸಬೇಕು. ಇಂದು ವಿಶ್ವ ಪರಿಸರ ದಿನವನ್ನ ಎಲ್ಲೆಡೆ ಆಚರಣೆ ಮಾಡಲಾಗುತ್ತಿದ್ದು, ಹಸಿರು ಉಳಿಸಲು ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ ಎಂದು ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಮನವಿ ಮಾಡಿದರು.
ಪರಿಸರ ಉಳಿಸಿದರೆ ದೇಶ ಉಳಿದಂತೆ, ಎಲ್ಲರೂ ಗಿಡ-ಮರ ಬೆಳೆಸಿ: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ - ಸಾಲುಮರದ ತಿಮ್ಮಕ್ಕ
ಜನರು ಈ ಭೂಮಿ ಮೇಲೆ ಉಳಿಯಬೇಕು ಎಂದರೆ ಈಗಿನ ಪರಿಸ್ಥಿತಿಯಲ್ಲಿ ಹಸಿರು ಮಾಯಾವಾಗದಂತೆ, ಕೆರೆ ಕಟ್ಟೆ ಬರಿದಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಗಿಡ-ಮರ ನೆಟ್ಟು, ದೇಶ ಉಳಿಸುವ ಕೆಲಸ ಆಗಬೇಕು ಎಂದು ಸಾಲುಮರದ ತಿಮ್ಮಕ್ಕ ಕೋರಿದ್ದಾರೆ.
ವಿಶ್ವ ಪರಿಸರ ದಿನದ ಹಿನ್ನೆಲೆ ಈಟಿವಿ ಭಾರತದ ಜೊತೆ ಮಾತಾನಾಡಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ, ಇವತ್ತು ಪರಿಸರ ದಿನಾಚರಣೆ. ಗಿಡ-ಮರ ಬೆಳೆಸುವ ಪ್ರವೃತ್ತಿಯನ್ನ ಜನರು ಬೆಳೆಸಿಕೊಳ್ಳಬೇಕು. ಜನರು ಈ ಭೂಮಿ ಮೇಲೆ ಉಳಿಯಬೇಕು ಎಂದರೆ ಈಗಿನ ಪರಿಸ್ಥಿತಿಯಲ್ಲಿ ಹಸಿರು ಮಾಯಾವಾಗದಂತೆ, ಕೆರೆ ಕಟ್ಟೆ ಬರಿದಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಗಿಡ-ಮರ ನೆಟ್ಟು, ದೇಶ ಉಳಿಸುವ ಕೆಲಸ ಆಗಬೇಕು. ಇಡೀ ವಿಶ್ವವೇ ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿದೆ. ಸದ್ಯ ಕಾಡುತ್ತಿರುವ ಈ ಸಾಂಕ್ರಮಿಕ ಕಾಯಿಲೆ ಕಸಾಲೆ ಪರಿಹಾರವಾಗಲಿ ಎಂದರು.
ಇನ್ನು ಸಾಲುಮರದ ತಿಮ್ಮಕ್ಕನವರ ಮಗ ಉಮೇಶ್ ಮಾತಾನಾಡಿ, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರು ಬದುಕಿನ ಉದ್ದಕ್ಕೂ ಪರಿಸರದ ಬಗ್ಗೆ ಕಾಳಜಿ ವಹಿಸಿದವರು. ಎಲ್ಲರೂ ಗಿಡ ಮರ ಬೆಳೆಸುವಂತೆ ಕೋರಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಪ್ರತಿ ವರ್ಷ ಕನಿಷ್ಠ 10 ಗಿಡ ಮರಗಳನ್ನ ಬೆಳೆಸುವ ಕೆಲಸ ಮಾಡಬೇಕು. ಈ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಿ, ಪರಿಸರ ಶುದ್ಧ ಮಾಡೋಣ ಎಂದರು. ಕೊರೊನಾ ಸೋಂಕು ಎಲ್ಲರನ್ನೂ ಕಾಡುತ್ತಿದ್ದು, ಮಾಸ್ಕ್, ಸ್ಯಾನಿಟೈಸರ್ ಬಳಸುವಂತೆ ಇದೇ ವೇಳೆ ಮನವಿ ಮಾಡಿದರು.