ಕರ್ನಾಟಕ

karnataka

ETV Bharat / state

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನ ಹಾಸ್ಟೆಲ್‌ನಿಂದ ಹೊರ ಹಾಕುವಂತಿಲ್ಲ: ಅಶ್ವತ್ಥ ನಾರಾಯಣ - ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ

ಹಾಸ್ಟೆಲ್‌ಗಳಲ್ಲಿ ಇದ್ದುಕೊಂಡು ಎಂಜಿನಿಯರಿಂಗ್‌, ಡಿಪ್ಲೋಮಾ, ಪಾಲಿಟೆಕ್ನಿಕ್‌, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಹೊರಗೆ ಕಳಿಸಬಾರದು. ಪರೀಕ್ಷೆ ಮುಗಿಯುವ ತನಕ ಅವರಿಗೆ ಊಟ-ವಸತಿ ಸೇರಿದಂತೆ ನೀಡಲಾಗುತ್ತಿರುವ ಎಲ್ಲ ಸೌಲಭ್ಯಗಳನ್ನು ಮುಂದುವರಿಸಬೇಕು ಎಂದು ಡಾ. ಸಿ.ಎನ್.‌ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ

By

Published : Apr 23, 2021, 6:47 AM IST

ಬೆಂಗಳೂರು: ಎಂಜಿನಿಯರಿಂಗ್‌, ಡಿಪ್ಲೋಮಾ ಸೇರಿದಂತೆ ಉನ್ನತ ಶಿಕ್ಷಣ ವಿಭಾಗದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿದ್ದರೆ ಅಂಥವರನ್ನು ಅಲ್ಲಿಂದ ಹೊರ ಕಳುಹಿಸುವಂತಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, "ಹಾಸ್ಟೆಲ್‌ಗಳಲ್ಲಿ ಇದ್ದುಕೊಂಡು ಎಂಜಿನಿಯರಿಂಗ್‌, ಡಿಪ್ಲೋಮಾ, ಪಾಲಿಟೆಕ್ನಿಕ್‌, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಹೊರಗೆ ಕಳಿಸಬಾರದು. ಪರೀಕ್ಷೆ ಮುಗಿಯುವ ತನಕ ಅವರಿಗೆ ಊಟ ವಸತಿ ಸೇರಿದಂತೆ ನೀಡಲಾಗುತ್ತಿರುವ ಎಲ್ಲ ಸೌಲಭ್ಯಗಳನ್ನು ಮುಂದುವರಿಸಬೇಕು. ‌ಹಾಸ್ಟಲ್‌ಗಳಲ್ಲಿ ಕೋವಿಡ್‌ ಬಗ್ಗೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಸಿಎಂ ಹೇಳಿದರು.

ಓದಿ: ರಾಜ್ಯಾದ್ಯಂತ ಕೊರೊನಾ ರಣಕೇಕೆ : ಒಂದೇ ದಿನದಲ್ಲಿ 25 ಸಾವಿರ ಗಡಿ ದಾಟಿದ ಕೋವಿಡ್​ ಕೇಸ್​!

For All Latest Updates

TAGGED:

ABOUT THE AUTHOR

...view details