ಬೆಂಗಳೂರು: ನಗರಕ್ಕೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರು ಆರ್ಬಿಐ ನೇಮಿಸಿರುವ ಆಡಳಿತಾಧಿಕಾರಿ ವರದಿ ಸಲ್ಲಿಸುವವರೆಗೆ ತಾಳ್ಮೆಯಿಂದ ಇರಿ ಎಂದು ಹೇಳಿದರು.
ಸುದ್ದಿಗೋಷ್ಠಿಗೆ ಮುನ್ನ ಬ್ಯಾಂಕ್ ಠೇವಣಿದಾರ ನಿಯೋಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಗೆ ಆಗಮಿಸಿದ್ದು, ಪ್ರತಿಬಾರಿಯೂ ಪ್ರಧಾನಿ ಮೋದಿ ಠೇವಣಿದಾರರ ಹಣವನ್ನು ಮರುಪಾವತಿ ಮಾಡುವ ಬಗ್ಗೆ ನನ್ನನ್ನು ಕೇಳುತ್ತಾರೆ. ಹೀಗಾಗಿ ನೇಮಿಸಿರುವ ಆಡಳಿತಾಧಿಕಾರಿ ಹಣವನ್ನು ನಿಮ್ಮ ಖಾತೆಯಿಂದ ಪಡೆಯುವ ಅವಕಾಶ ಇದೆ ಎಂದು ಠೇವಣಿ ದಾರರಿಗೆ ವಿತ್ತ ಸಚಿವೆ ಸಮಾಧಾನದ ಮಾತುಗಳನ್ನು ಹೇಳಿದರು.