ಬೆಂಗಳೂರು:ಕೋವಿಡ್-19 ಅಟ್ಟಹಾಸ ನಿಯಂತ್ರಿಸಲು ಹರಸಾಹಸ ನಡೆಸಿರುವ ರಾಜ್ಯ ಸರ್ಕಾರ ಮತ್ತೊಮ್ಮೆ ಭಾನುವಾರ ಲಾಕ್ಡೌನ್ಗೆ ಮುಂದಾಗಿದ್ದು, ನಾಳೆ ರಾಜ್ಯ ಸಂಪೂರ್ಣ ಲಾಕ್ಡೌನ್ ಆಗಲಿದೆ.
ಇದು ಕೇವಲ ಭಾನುವಾರದ ಲಾಕ್ಡೌನ್ ಮಾತ್ರವಲ್ಲ, ಶನಿವಾರ ಸಂಜೆಯಿಂದ ಸೋಮವಾರ ಬೆಳಗಿನ ಜಾವದವರೆಗೆ ಲಾಕ್ಡೌನ್ ಇರಲಿದೆ ಎಂಬುದನ್ನು ಅರಿಯಬೇಕಿದೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆಯವರೆಗೆ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರಲಿದೆ. ಅಲ್ಲದೆ ಸೋಮವಾರದಿಂದ ಬೆಂಗಳೂರು ಸೀಲ್ ಡೌನ್ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ಏನೇನು ಇರುವುದಿಲ್ಲ?
ತುರ್ತು ಸೇವೆ ಒದಗಿಸುವ ಇಲಾಖೆ ಕಚೇರಿಗಳನ್ನು ಹೊರತುಪಡಿಸಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಕಚೇರಿಗಳು, ಬೋರ್ಡ್ಗಳು ಬಂದ್ ಆಗಲಿವೆ. ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ, ಎನ್ಡಬ್ಲ್ಯೂಕೆಆರ್ಟಿಸಿ, ಎನ್ಇಕೆಆರ್ಟಿಸಿ ಬಸ್ಗಳ ಸಂಚಾರ ಇರುವುದಿಲ್ಲ. ಜೊತೆಗೆ ಕ್ಯಾಬ್, ಆಟೋ, ವಾಣಿಜ್ಯ ಮಳಿಗೆ ಇನ್ನಿತರ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ಮಾಲ್ಗಳು ಮುಚ್ಚಿರಲಿವೆ. ಈಗಾಗಲೇ ಬಾಗಿಲು ತೆರೆಯದ ಚಿತ್ರಮಂದಿರಗಳೂ ಸ್ತಬ್ಧವಾಗಿರಲಿವೆ. ಯಾವುದೇ ಮದ್ಯದ ಅಂಗಡಿಗಳು ತೆರೆಯುವುದಿಲ್ಲ. ಎಂಆರ್ಪಿ, ವೈನ್ ಶಾಪ್, ಕ್ಲಬ್, ಬಾರ್ಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಏನೆಲ್ಲಾ ಇರಲಿದೆ?