ಬೆಂಗಳೂರು:ಸರ್ಕಾರದ ವಿರುದ್ಧದ ಸಾರಿಗೆ ನೌಕರರ ಸಮರ 6ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ ಕೊಡ್ತಾಯಿಲ್ಲ, ಸಾರಿಗೆ ನೌಕರರು ಬಿಡ್ತಾಯಿಲ್ಲ ಅನ್ನೊ ಪರಿಸ್ಥಿತಿ ಎದುರಾಗಿದೆ. ಇಷ್ಟು ದಿನ ಶಾಂತಿಯುತವಾಗಿ ನಡೆಯುತ್ತಿದ್ದ ಮುಷ್ಕರ ಇಂದಿನಿಂದ ತಟ್ಟೆ ಲೋಟ ಹಿಡಿದು ಸಾರಿಗೆ ನೌಕರರು ಮತ್ತವರ ಕುಟುಂಬಸ್ಥರು ಬೀದಿಗೆ ಬಂದಿದ್ದಾರೆ.
ಇಂದು ರಾಜ್ಯಾದ್ಯಂತ ಡಿಸಿ ಕಚೇರಿ, ತಹಶೀಲ್ದಾರ್ ಕಚೇರಿಗಳ ಮುಂಭಾಗ ತಟ್ಟೆ, ಲೋಟ ಬಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಕೇಂದ್ರ ಕಚೇರಿ ಮುಂಭಾಗ ಬೆ. 11.30 ಗಂಟೆಯಿಂದ ತಟ್ಟೆ ಲೋಟ ಹಿಡಿದು ಚಳವಳಿ ಆರಂಭಿಸಿದ್ದಾರೆ.
ಸರ್ಕಾರದ ಸಂಬಳ ಸಾಲುತ್ತಿಲ್ಲ, ಅರ್ಧ ಹೊಟ್ಟೆಯಲ್ಲಿ ಜೀವನ ನಡೆಸುತ್ತಿದ್ದೇವೆ. ನಾಳೆ ಯುಗಾದಿ ಹಬ್ಬ ಇದೆ. ಮಾರ್ಚ್ ತಿಂಗಳ ಸಂಬಳ ಆಗಿಲ್ಲ. 6ನೇ ವೇತನ ಆಯೋಗ ಜಾರಿಯಾಗಿಲ್ಲ. ಇಂದು ಬೇಡಿಕೆ ಈಡೇರಿಸದಿದ್ದಲ್ಲಿ ನಾಳೆಯಿಂದ ಅನಿರ್ದಿಷ್ಟಾವದಿ ಮುಷ್ಕರ ಮುಂದುವರೆಸುವ ಎಚ್ಚರಿಕೆ ನೀಡಿದ್ದಾರೆ.