ಕರ್ನಾಟಕ

karnataka

ETV Bharat / state

ರಾಜ್ಯ ಕಾರಾಗೃಹ ಇಲಾಖೆ ಹೆಸರು ಬದಲಾಯಿಸಿ ಗೃಹ ಇಲಾಖೆ ಆದೇಶ - ಗೃಹ ಇಲಾಖೆ

ರಾಜ್ಯ ಕಾರಾಗೃಹ ಇಲಾಖೆಯ‌ ಹೆಸರನ್ನು ಪರಿಷ್ಕೃತ ಆದೇಶದಂತೆ ಡಿಪಾರ್ಟಮೆಂಟ್ ಆಫ್ ಪ್ರಿಸನ್ ಹಾಗೂ ಕರೆಕ್ಷನಲ್ ಸರ್ವೀಸ್ ಎಂದು ಬದಲಾಯಿಸಿ ಆದೇಶ ಜಾರಿ ಮಾಡಲಾಗಿದೆ.

ರಾಜ್ಯ ಕಾರಾಗೃಹ ಇಲಾಖೆ

By

Published : Jul 29, 2019, 9:20 PM IST

ಬೆಂಗಳೂರು:ಸುಪ್ರೀಂಕೋರ್ಟ್ ನಿಯಮದ್ವನಯ ರಾಜ್ಯ ಕಾರಾಗೃಹ ಇಲಾಖೆಯ‌ ಹೆಸರನ್ನು ಕೊಂಚ ಬದಲಾವಣೆ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಹಲವು ವರ್ಷಗಳಿಂದ ಪ್ರಿಸನ್ ಡಿಪಾರ್ಟಮೆಂಟ್ ಎನ್ನಲಾಗುತ್ತಿತ್ತು. ಪರಿಷ್ಕೃತ ಆದೇಶದಂತೆ ಡಿಪಾರ್ಟಮೆಂಟ್ ಆಫ್ ಪ್ರಿಸನ್ ಹಾಗೂ ಕರೆಕ್ಷನಲ್ ಸರ್ವೀಸ್ ಎಂದು ಬದಲಾಯಿಸಿ ಆದೇಶ ಜಾರಿ ಮಾಡಲಾಗಿದೆ.

ಅಲ್ಲದೆ ಪ್ರಿಸನ್ ಡಿಪಾರ್ಟಮೆಂಟ್ ಅಧಿಕಾರಿಗಳಿಗೆ ರೀ ಡೆಸಿಗ್ನೇಷನ್‌ ನೀಡಿರುವ ಗೃಹ ಇಲಾಖೆಯು ಬಂಧಿಖಾನೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಿಸನ್ ಎಡಿಜಿಪಿ ಹಾಗೂ ಐಜಿಪಿ ಬದಲಿಗೆ ಸದ್ಯ ಡಿಜಿ ಫಾರ್ ಪ್ರಿಸನ್ಸ್ ಹಾಗೂ ಕರೆಕ್ಷನಲ್ ಸರ್ವೀಸ್ ಎಂದು ಬದಲಾವಣೆ ಮಾಡಿದೆ.

ಮಾಡೆಲ್ ಪ್ರಿಸನ್ ಮ್ಯಾನ್ಯೂವಲ್ 2016ರ‌ ಅನ್ವಯ ಬದಲಾವಣೆ ತಂದಿದ್ದು, ಈ ಹಿಂದೆ ರಾಜ್ಯ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿಯೂ ಡಿಜಿ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಕರ್ನಾಟಕದಲ್ಲೂ ಬದಲಾವಣೆ ತಂದು ಗೃಹ ಇಲಾಖೆ ಜಾರಿ ಆದೇಶ ಹೊರಡಿಸಿದೆ.

ABOUT THE AUTHOR

...view details