ಬೆಂಗಳೂರು:ಭಾನುವಾರ ನಡೆದ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. ಸಂಘದ ಕಾರ್ಯಕಾರಿ ಸಮಿತಿಯ ಒಟ್ಟು 35 ನಿರ್ದೇಶಕರ ಸ್ಥಾನಗಳ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.
ಆಯಾ ಜಿಲ್ಲೆಯ ಮತ ಎಣಿಕೆ ಕೇಂದ್ರಗಳಲ್ಲಿ ಮತಗಳ ಎಣಿಕೆ ಶುರುವಾಗಿದೆ. ರಾಜ್ಯಾದ್ಯಂತ 35 ನಿರ್ದೇಶಕರ ಸ್ಥಾನಕ್ಕೆ 221 ಅಭ್ಯರ್ಥಿಗಳು ಕಣದಲ್ಲಿದ್ದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಂದ 15, ಮೈಸೂರು 3, ಮಂಡ್ಯ 4, ಹಾಸನ 3, ತುಮಕೂರು 2, ಚಿತ್ರದುರ್ಗ 1, ಕೋಲಾರ-ಚಿಕ್ಕಬಳ್ಳಾಪುರ 3, ದಕ್ಷಿಣ ಕನ್ನಡ-ಉಡುಪಿ 1, ಕೊಡಗು 1, ಶಿವಮೊಗ್ಗ- ಉತ್ತರ ಕನ್ನಡ 1, ಚಿಕ್ಕಮಗಳೂರು 1 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಒಟ್ಟು 1,049 ಮತ ಕೇಂದ್ರಗಳಲ್ಲಿ 5,20,721 ಲಕ್ಷ ಮತದಾರರಿದ್ದರು.