ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ಅತ್ಯಂತ ಸೂಕ್ಷ್ಮ ಮತ್ತು ಸವಾಲಿನ ವೃತ್ತಿಯ ಜತೆಗೆ ಸಂಸಾರಿಕ ಜವಾಬ್ದಾರಿಗಳನ್ನೂ ನಿಭಾಯಿಸುತ್ತಾ, ಕೋವಿಡ್-19ನಂತಹ ಗಂಭೀರ ಪರಿಸ್ಥಿತಿಗಳಲ್ಲಿ ಒತ್ತಡಕ್ಕೊಳಗಾಗದೆ ಸೇವೆಯಲ್ಲೇ ಸಾರ್ಥಕತೆ ಕಾಣುವ ಸಮಸ್ತ ಶುಶ್ರೂಷಕಿಯರಿಗೆ ಅಭಿನಂದನೆಗಳು ಎಂದು ಶುಭಕೋರಿದ್ದಾರೆ.
ವಿಶ್ವ ಶುಶ್ರೂಷಕರ ದಿನಕ್ಕೆ ರಾಜ್ಯ ನಾಯಕರಿಂದ ಶುಭಾಶಯ
ಇಂದು ವಿಶ್ವ ಶುಶ್ರೂಷಕರ ದಿನ. ಈ ಹಿನ್ನೆಲೆಯಲ್ಲಿ ನಾಡಿದ ರಾಜಕೀಯ ಮುಖಂಡರು ಶುಭ ಕೋರಿದ್ದಾರೆ.
ಪ್ರಪಂಚ ಕೊರೊನಾ ಮಹಾಮಾರಿಯ ವಿರುದ್ಧ ಯುದ್ಧಕ್ಕೆ ನಿಂತಿರುವ ಸಂದರ್ಭದಲ್ಲಿಯೇ ವಿಶ್ವ ದಾದಿಯರ ದಿನ ಬಂದಿದೆ. ದಾದಿಯರಿಗೆ ಹಾರ್ದಿಕ ಶುಭಾಶಯಗಳು. ಈ ಮಹಾಸಂಕಟದ ಸಮಯದಲ್ಲಿ ಮಾತೃ ಹೃದಯದ ನರ್ಸ್‌ಗಳು ಮಾಡುತ್ತಿರುವ ಸೇವೆ ನಮ್ಮ ಕಣ್ಣ ಮುಂದಿದೆ. ದಾದಿಯರ ಜೀವನಮಟ್ಟವನ್ನು ಸುಧಾರಿಸಲು ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಫ್ರಂಟ್ಲೈನ್ನಲ್ಲಿದ್ದು ದುಡಿಯುತ್ತಿರುವ ನಮ್ಮ ವೈದ್ಯರು, ನರ್ಸ್‌ಗಳು, ಆರೋಗ್ಯ ಸಿಬ್ಬಂದಿಗೆ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಟ್ವೀಟ್ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಶುಭ ಕೋರಿದ್ದಾರೆ.