ಬೆಂಗಳೂರು:ರಾಜ್ಯ ಸರ್ಕಾರ ರಚನೆಯಾದ ಬಳಿಕ ದೊಡ್ಡಮಟ್ಟದಲ್ಲಿ 211 ಜನ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ನಿನ್ನೆ ಆದೇಶ ಹೊರಡಿಸಿದ್ದು, 24 ಗಂಟೆಯಾಗುವಷ್ಟರಲ್ಲೇ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವರ್ಗವಾಗಿದ್ದ 16 ಮಂದಿ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ತಡೆ ಆದೇಶ ಸಿಕ್ಕಿದೆ.
ಆಡಳಿತಾತ್ಮಕ ಕಾರಣ ನೀಡಿ ಮಂಗಳವಾರ ಸಂಜೆ 211 ಮಂದಿ ಇನ್ಸ್ಪೆಕ್ಟರ್ಗಳ ವರ್ಗಾವಣೆ ಆದೇಶ ಹೊರಡಿಸಿತ್ತು. ಬುಧವಾರ ಬೆಳಗ್ಗೆ 16 ಮಂದಿ ಇನ್ಸ್ಪೆಕ್ಟರ್ ಗಳ ಆದೇಶಕ್ಕೆ ತಡೆ ನೀಡಿದೆ. ಬೆಂಗಳೂರು ನಗರ ವ್ಯಾಪ್ತಿ 16 ಮಂದಿ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಬಗ್ಗೆ ವೈರ್ ಲೆಸ್ ಮೂಲಕ ಆಯಾ ಡಿಸಿಪಿ ಕಚೇರಿಗಳಿಗೆ ಮಾಹಿತಿ ನೀಡಲಾಗಿದೆ.