ಕರ್ನಾಟಕ

karnataka

ETV Bharat / state

ಶಾದಿಭಾಗ್ಯ ಬಳಿಕ ಅನ್ನಭಾಗ್ಯ, ಕಿಸಾನ್ ಯೋಜನೆಯನ್ನೂ ಕೈಬಿಡಲಿದ್ದಾರೆ: ಯು.ಟಿ ಖಾದರ್ - ರಾಜ್ಯ ಸರ್ಕಾರ ಹಣಕಾಸಿನ ಸಂಕಷ್ಟ

ಸರ್ಕಾರ ಆರ್ಥಿಕವಾಗಿ ಸಂಕಷ್ಟದಲ್ಲಿದೆ ಎಂದು ಜನಪರ ಯೋಜನೆಗಳಿಗೆ ಕಡಿತ ಹಾಕುವುದು ಸರಿಯಲ್ಲ. ಶಾದಿ ಭಾಗ್ಯ ಯೋಜನೆ ಬಡವರಿಗಾಗಿ ತಂದಿರುವಂತಹದ್ದು. ಇದನ್ನು ರದ್ದು ಮಾಡುತ್ತೇವೆ ಎಂದು ಬಜೆಟ್​ನಲ್ಲಿ ಹೇಳಿಲ್ಲ. ಅದ್ರೆ ಈಗ ಏಕಾಏಕಿ ಯೋಜನೆ ನಿಲ್ಲಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಕಿಡಿಕಾರಿದರು.

U.T khadar
ಮಾಜಿ ಸಚಿವ ಯು.ಟಿ ಖಾದರ್

By

Published : Mar 9, 2020, 4:25 PM IST

ಬೆಂಗಳೂರು: ಒಂದು ವರ್ಷದ ಬಜೆಟ್​ಗೆ ಒಪ್ಪಿಗೆ ಪಡೆಯುವ ಚರ್ಚೆ ಆಗುತ್ತಿದೆ. ಆದರೆ ರಾಜ್ಯ ಸರ್ಕಾರ ಹಣಕಾಸಿನ ಸಂಕಷ್ಟ ಅನುಭವಿಸುತ್ತಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಆರ್ಥಿಕವಾಗಿ ಸಂಕಷ್ಟದಲ್ಲಿದೆ ಎಂದು ಜನಪರ ಯೋಜನೆಗಳಿಗೆ ಕಡಿತ ಹಾಕುವುದು ಸರಿಯಲ್ಲ. ಶಾದಿ ಭಾಗ್ಯ ಯೋಜನೆ ಬಡವರಿಗಾಗಿ ತಂದಿರುವಂತಹದ್ದು. ಇದನ್ನು ರದ್ದು ಮಾಡುತ್ತೇವೆ ಎಂದು ಬಜೆಟ್​ನಲ್ಲಿ ಹೇಳಿಲ್ಲ. ಅದ್ರೆ ಈಗ ಏಕಾಏಕಿ ಯೋಜನೆ ನಿಲ್ಲಿಸುವ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏಪ್ರಿಲ್ ಬಳಿಕ ಕಿಸಾನ್ ಯೋಜನೆ ಸೇರಿದಂತೆ ಹಲವು ಯೋಜನೆ ನಿಲ್ಲಿಸುವ ಲೆಕ್ಕಾಚಾರ ಹಾಕಿದ್ದಾರೆ. ಏಪ್ರಿಲ್1ರ ಬಳಿಕ ಅನ್ನಭಾಗ್ಯ ಯೋಜನೆ ಕಡಿತ ಮಾಡುವ ಸಾಧ್ಯತೆ ಇದೆ. ಇದನ್ನ ನಾವು ಸದನದಲ್ಲಿ ಪ್ರಶ್ನೆ ಮಾಡುತ್ತೇವೆ ಎಂದರು.

ಶಾಸಕರ ಭವನ ಹಾಗೂ ಶಾಸಕರ ಮೊಗಸಾಲೆಯಲ್ಲಿ ಪತ್ರಕರ್ತರ ನಿರ್ಬಂಧದ ಕುರಿತು ಮಾತನಾಡಿ, ಸ್ಪೀಕರ್ ಆದೇಶ ಸರಿಯಲ್ಲ. ಇದು ಸಂವಿಧಾನದ ನಾಲ್ಕನೇ ಅಂಗಕ್ಕೆ ಮಾಡಿದ ಅಪಮಾನ. ನಾವು ಸಹ ಪತ್ರಕರ್ತರ ಜೊತೆ ಚರ್ಚೆ ಮಾಡಿ ಹಲವು ವಿಚಾರ ತಿಳಿದುಕೊಳ್ಳುತ್ತೇವೆ. ಹೀಗಾಗಿ ಪತ್ರಕರ್ತರಿಗೆ ಸ್ಪೀಕರ್ ನಿರ್ಬಂಧ ಹಾಕುವುದು ಸರಿಯಲ್ಲ ಎಂದು ತಿಳಿಸಿದರು.

ABOUT THE AUTHOR

...view details