ಬೆಂಗಳೂರು:ರಾಜ್ಯ ಮೈತ್ರಿ ಸರ್ಕಾರಕ್ಕೆ ಇಂದು 1.30ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದರಿಂದ ರಾಜ್ಯ ಸರ್ಕಾರಕ್ಕೆ ಉಂಟಾಗಿದ್ದ ಆತಂಕವನ್ನು ಸುಪ್ರೀಂ ಕೋರ್ಟ್ ನಿವಾರಿಸುತ್ತಾ ಎಂಬುದು ಕುತೂಹಲದ ವಿಷಯವಾಗಿ ಮಾರ್ಪಟ್ಟಿದೆ.
ಸಮ್ಮಿಶ್ರ ಸರ್ಕಾರದ ಪರವಾಗಿ ಸಲ್ಲಿಕೆಯಾಗಿರುವ 5 ಅರ್ಜಿಗಳ ವಿಚಾರಣೆ ನಡೆಯುತ್ತಿದ್ದು, ಇಂದಿನ ಬಹುಮತ ಸಾಬೀತು ಪ್ರಕ್ರಿಯೆಗೆ ಸುಪ್ರೀಂ ತಡೆಯಾಜ್ಞೆ ನೀಡುತ್ತಾ ಅಥವಾ ಅರ್ಜಿಯನ್ನು ವಜಾಗೊಳಿಸಿ ನಿಗದಿಯಂತೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸುತ್ತಾ ಅನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ.
ಸುಪ್ರೀಂ ತೀರ್ಪಿನ ಮೇಲೆ ಕುತೂಹಲ ಇನ್ನು ಸಿಎಂ ಕುಮಾರಸ್ವಾಮಿ ನಡೆಸಿರುವ ಭಾಷಣ ಒಂದು ರೀತಿ ವಿದಾಯ ಭಾಷಣದಂತೆ ಕಂಡುಬರುತ್ತಿತ್ತು. ಇಂದು ಸಮ್ಮಿಶ್ರ ಸರ್ಕಾರ ಅಳಿವು-ಉಳಿವಿನ ನಿರ್ಧಾರ ಇನ್ನೇನು ಕೆಲಸಮಯದಲ್ಲಿ ಆಗಲಿದೆ. ರಾಜ್ಯ ರಾಜಕೀಯದಲ್ಲಿ ಸಾಕಷ್ಟು ತಿರುವು ಪಡೆದುಕೊಳ್ಳುತ್ತಾ, ಪ್ರತಿ ಸಂದರ್ಭದಲ್ಲಿಯೂ ಕುತೂಹಲ ಮೂಡಿಸುತ್ತದೆಯಾ? ಒಂದು ವರ್ಷ ಕಳೆದಿರುವ ಮೈತ್ರಿ ಸರ್ಕಾರ ಇಂದು ಪತನವಾಗುತ್ತದೆಯೋ? ಇಲ್ಲವೇ ಚಮತ್ಕಾರಗಳು ನಡೆದು ಇನ್ನಾರು ತಿಂಗಳು ಅಸ್ತಿತ್ವದಲ್ಲಿ ಇರುತ್ತಾ ಅನ್ನುವ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಸಿಗಲಿದೆ.
ಒಟ್ಟಾರೆ ಎಲ್ಲಕ್ಕೂ ಉತ್ತರ ನೀಡುವ ವಿಧಾನಸೌಧ ಇಂದು ಎಲ್ಲರ ನಿರೀಕ್ಷೆಯ ಹಾಗೂ ಕಾತರದ ಕಣ್ಣು ನೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ.