ಕರ್ನಾಟಕ

karnataka

ETV Bharat / state

ಸರ್ಕಾರದ ಮಹತ್ವದ ಯೋಜನೆ ' ಸಪ್ತಪದಿ ' ಮೂಂದೂಡಿಕೆ: ಕೋಟಾ ಶ್ರೀನಿವಾಸ ಪೂಜಾರಿ - ರಾಜ್ಯ ಸರ್ಕಾರದ ಮಹತ್ವದ ' ಸಪ್ತಪದಿ ಯೋಜನೆ

ರಾಜ್ಯ ಸರ್ಕಾರದ ಮಹತ್ವದ ' ಸಪ್ತಪದಿ ಯೋಜನೆಯಡಿ ಏಪ್ರಿಲ್ 26 ರಂದು ಪ್ರಥಮ ಹಂತದಲ್ಲಿ ನಡೆಯಬೇಕಿದ್ದ, ವಿವಾಹಗಳನ್ನು ಮುಂದೂಡಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕೋಟಾ ಶ್ರೀನಿವಾಸ ಪೂಜಾರಿ
ಕೋಟಾ ಶ್ರೀನಿವಾಸ ಪೂಜಾರಿ

By

Published : Apr 7, 2020, 4:30 PM IST

Updated : Apr 7, 2020, 5:29 PM IST

ಬೆಂಗಳೂರು: ಕೊರೊನಾ ವೈರಸ್ ಎಫೆಕ್ಟ್​​​ನಿಂದಾಗಿ ರಾಜ್ಯ ಸರ್ಕಾರದ ಮಹತ್ವದ ' ಸಪ್ತಪದಿ ' ಯೋಜನೆಯನ್ನು ಮುಂದೂಡಲಾಗಿದೆ.

ಏಪ್ರಿಲ್ 26 ರಂದು ಪ್ರಥಮ ಹಂತದಲ್ಲಿ ನಡೆಯಬೇಕಿದ್ದ, ಸಪ್ತಪದಿ ಯೋಜನೆ ಮುಂದೂಡಲಾಗಿದೆ. ಆ ದಿನದಂದು ನಡೆಯಬೇಕಿದ್ದ ಸಪ್ತಪದಿ ಯೋಜನೆಯಡಿ,‌ ಒಂದೂವರೆ ಸಾವಿರ ವಧು -ವರರು ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದರು. ಈ ಯೋಜನೆಯಡಿ ಬಡ ವಧು- ವರರಿಗೆ ಸರ್ಕಾರದಿಂದ ಉಚಿತ ವಿವಾಹ ಭಾಗ್ಯ ಕಲ್ಪಿಸಲಾಗಿತ್ತು. ಇದೀಗ ಕೊರೊನಾದಿಂದ ಸಪ್ತಪದಿ ಯೋಜನೆ ಮುಂದೂಡಲಾಗಿದೆ. ಇದಕ್ಕೆ ಸಿಎಂ ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಎರಡನೇ ಹಂತದ ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ 24 ರಂದು ನಡೆಯಲಿದೆ. ಮೊದಲ ಮತ್ತು ಎರಡನೇ ಹಂತಗಳನ್ನು ಒಟ್ಟಿಗೆ ಸೇರಿಸಿ ಒಂದೇ ಹಂತದಲ್ಲಿ ಸಾಮೂಹಿಕ ವಿವಾಹ‌ ಕಾರ್ಯಕ್ರಮ ಮಾಡುವ ಉದ್ದೇಶವಿದೆ. ಈ ಬಗ್ಗೆ ಇಲಾಖೆ ಪರಿಶೀಲನೆ ಮಾಡುತ್ತಿದೆ ಎಂದರು.

ಎ ದರ್ಜೆಯ ಎಲ್ಲ ದೇವಸ್ಥಾನಗಳಲ್ಲಿ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ಮುಜರಾಯಿ ಇಲಾಖೆ ಅಡಿ ಸಂಬಳ ಪಡೆಯುತ್ತಿರುವ ಅರ್ಚಕರಿಗೆ, ಕಲಾವಿದರಿಗೆ ಮತ್ತು ದೇವಾಲಯ ಸ್ವಚ್ಛ ಮಾಡುವ ಸಿಬ್ಬಂದಿಗೆ ಸಂಬಳ ನಿಲ್ಲಿಸದಂತೆ ಸೂಚನೆ ನೀಡಿದ್ದೇನೆ. ಹಲವು ಕಡೆ ಮಂಗಳಾರತಿ ತಟ್ಟೆಗೆ ದಕ್ಷಿಣೆ ಇಲ್ಲದೇ ಹಲವು ಅರ್ಚಕರು ಸಂಕಷ್ಟದಲ್ಲಿ ಇದ್ದಾರೆ. ಇವರಿಗೆ ಯಾವ ರೀತಿಯಲ್ಲಿ ನೆರವು ನೀಡಬಹುದು ಎಂಬ ಚಿಂತನೆ ನಡೆದಿದೆ. ಉಳಿದಂತೆ ರಾಜ್ಯದ ನಾನಾ ದೇವಸ್ಥಾನಗಳಲ್ಲಿ ಆಡಳಿತ ಮಂಡಳಿ‌ ವತಿಯಿಂದಲೇ ರಾಜ್ಯದ ಸುಮಾರು 37 ಸಾವಿರ ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

Last Updated : Apr 7, 2020, 5:29 PM IST

ABOUT THE AUTHOR

...view details