ಕರ್ನಾಟಕ

karnataka

ETV Bharat / state

ಐಪಿಎಸ್ ಅಧಿಕಾರಿಗಳ ವರ್ಗ.. ಶಿವಮೊಗ್ಗಕ್ಕೆ ಮಿಥುನ್, ಬಳ್ಳಾರಿಗೆ ರಂಜಿತ್​ ನೂತನ ಎಸ್​ಪಿ - ಐಪಿಎಸ್​ ಅಧಿಕಾರಿಗಳು ವರ್ಗ ಮಾಡಿದ ರಾಜ್ಯ ಸರ್ಕಾರ

ಆಡಳಿತಕ್ಕೆ ಚುರುಕು ನೀಡಲು ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸೋಮವಾರ ಆದೇಶಿಸಿದೆ.

state-government-transfer-of-ips-officers
ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

By

Published : Oct 4, 2022, 9:01 AM IST

ಬೆಂಗಳೂರು:ಆಡಳಿತಕ್ಕೆ ಚುರುಕು ನೀಡಲು ಸರ್ಕಾರಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸೋಮವಾರ ಆದೇಶಿಸಿದೆ.

ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಅವರನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅದಾವತ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಭಯೋತ್ಪಾದನೆ ನಿಗ್ರಹ ಕೇಂದ್ರದ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ.

ಭಯೋತ್ಪಾದನೆ ನಿಗ್ರಹ ಕೇಂದ್ರದ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಿ ಆದೇಶಿಸಲಾಗಿದೆ.

ಓದಿ:ಕಾಶ್ಮೀರ ಕಾರಾಗೃಹ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಶವವಾಗಿ ಪತ್ತೆ: ಕೊಲೆ ಶಂಕೆ

ABOUT THE AUTHOR

...view details