ಕರ್ನಾಟಕ

karnataka

ETV Bharat / state

ಮನೆ ಮನೆ ಬಾಗಿಲು ತಟ್ಟಲಿದ್ದಾರೆ ಆರೋಗ್ಯ ಕಾರ್ಯಕರ್ತರು; ಇದು ಕೋವಿಡ್ ಲಸಿಕೆ ವಿಶೇಷ ಅಭಿಯಾನ

ಮುಂಚೂಣಿ ಆರೋಗ್ಯ ಕಾರ್ಯಕರ್ತರು “Har Ghar Dastak” ಅಭಿಯಾನದಡಿ ಮನೆ ಮನೆ ಭೇಟಿ ನೀಡಬೇಕು. ಮೊದಲನೇ ಡೋಸ್ ಪಡೆಯದ ಹಾಗೂ ಎರಡನೇ ಡೋಸ್‌ಗೆ ಬಾಕಿ ಇರುವ ಪ್ರತಿಯೊಬ್ಬರನ್ನೂ ಲಸಿಕೆ ಪಡೆದಿದ್ದೀರಾ ಎಂದು ಪ್ರಶ್ನಿಸಬೇಕು. ನಂತರ ಕೋವಿಡ್-19 ಲಸಿಕೆ ಪಡೆಯಬೇಕಾದವರ ಪಟ್ಟಿ ಸಿದ್ಧ ಪಡಿಸಿಟ್ಟುಕೊಳ್ಳಬೇಕು.

Har Ghar Dastak Special COVID 19 Campaign
ಕೋವಿಡ್ 19 ಲಸಿಕೆ ಅಭಿಯಾನ್

By

Published : Nov 13, 2021, 2:52 AM IST

ಬೆಂಗಳೂರು: ಕೇಂದ್ರ ಸರ್ಕಾರದ ಸೂಚನೆಯಂತೆ ಕೋವಿಡ್-19 ಲಸಿಕಾಕರಣದ ಮೊದಲನೇ ಮತ್ತು ಎರಡನೇ ಡೋಸ್ ವ್ಯಾಪ್ತಿಯನ್ನು ವೃದ್ಧಿಸಲು ಸೂಚಿಸಿದೆ.. ಇದಕ್ಕಾಗಿ ಈಗಾಗಲೇ ನವೆಂಬರ್ 3 ರಿಂದ 30 ರವರೆಗೆ “ Har Ghar Dastak" ಅಭಿಯಾನ ಅನುಷ್ಠಾನಗೊಳಸಲು ಸೂಚಿಸಿದೆ. ಹೀಗಾಗಿ, ರಾಜ್ಯದಲ್ಲೂ ಈ ಅಭಿಯಾನದ ಅನುಷ್ಠಾನಕ್ಕಾಗಿ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ.

ಅಂದಹಾಗೇ, ಮುಂಚೂಣಿ ಆರೋಗ್ಯ ಕಾರ್ಯಕರ್ತರು “Har Ghar Dastak” ಅಭಿಯಾನದಡಿ ಮನೆ ಮನೆ ಭೇಟಿ ನೀಡಬೇಕು. ಮೊದಲನೇ ಡೋಸ್ ಪಡೆಯದ ಹಾಗೂ ಎರಡನೇ ಡೋಸ್‌ಗೆ ಬಾಕಿ ಇರುವ ಪ್ರತಿಯೊಬ್ಬರನ್ನೂ ಲಸಿಕೆ ಪಡೆದಿದ್ದೀರಾ ಎಂದು ಪ್ರಶ್ನಿಸಬೇಕು. ನಂತರ ಕೋವಿಡ್-19 ಲಸಿಕೆ ಪಡೆಯಬೇಕಾದವರ ಪಟ್ಟಿ ಸಿದ್ಧ ಪಡಿಸಿಟ್ಟುಕೊಳ್ಳಬೇಕು. ನಂತರ ಅವರ ಲಸಿಕೆ ಪಡೆಯಬೇಕಾದ ಅವಶ್ಯಕತೆಯ ಕುರಿತು ಜಾಗೃತಿ ಮೂಡಿಸಿ, ಸಜ್ಜುಗೊಳಿಸಬೇಕು ಹಾಗೂ ಸೂಕ್ತ ಸ್ಥಳದಲ್ಲಿ ಲಸಿಕಾಕರಣ ನಡೆಸಬೇಕು.

ಇನ್ನು ಕೋವಿಡ್-19 ನಿಂದ ಸಂಪೂರ್ಣ ರಕ್ಷಣೆ ಹೊಂದಲು ಎರಡೂ ಡೋಸ್ ಲಸಿಕೆ ಪಡೆಯುವುದು ಅತ್ಯವಶ್ಯಕ ಎಂಬ ಮಾಹಿತಿಯನ್ನು, ಅವರಿಗೆ ಮನದಟ್ಟು ಮಾಡಬೇಕು. ಹಾಗೇ ಅವರಲ್ಲಿ ಮನೆ ಮಾಡಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪ್ರಯತ್ನಿಸಬೇಕು.

ತಾತ್ಕಾಲಿಕ ಲಸಿಕಾ ಕೇಂದ್ರ ನಿರ್ಮಾಣ:

ಇನ್ನು ಹೆಚ್ಚು ಜನ ಸಂಚಾರವಿರುವ ಪ್ರದೇಶಗಳಾದ ಬಸ್‌ನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ ಮತ್ತು ಹಡಗು ನಿಲ್ದಾಣಗಳಲ್ಲಿ ಕೋವಿಡ್-19 ಲಸಿಕಾಕರಣ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಿ ಲಸಿಕಾಕರಣ ನಡೆಸಬೇಕು. ಜೊತೆಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ/ ವಿಶ್ವವಿದ್ಯಾನಿಲಯಗಳಲ್ಲಿ ಲಸಿಕಾಕರಣಕ್ಕಾಗಿ ಕ್ರಮ ಕೈಗೊಳ್ಳುಬೇಕು. ಕೋವಿಡ್-19 ನಿಂದ ಸಂಪೂರ್ಣ ಸಂರಕ್ಷಣೆ ಹೊಂದಲು ಲಸಿಕೆ ತಪ್ಪಿಹೋದ ಮತ್ತು ಬಿಟ್ಟು ಹೋದ ಅರ್ಹ ಫಲಾನುಭವಿಗಳ ಲಸಿಕಾಕರಣಕ್ಕೆ ವಿಶೇಷ ಒತ್ತು ನೀಡುಬೇಕೆಂದು ಸೂಚಿಸಲಾಗಿದೆ.

ಇದರರೊಟ್ಟಿಗೆ ಅತೀ ಕಡಿಮೆ ಪ್ರಗತಿ ಹೊಂದಿರುವ ಭೌಗೋಳಕ ಕಾರ್ಯ ಪ್ರದೇಶಗಳಲ್ಲಿ ಶೇ.100 ರಷ್ಟು ಲಸಿಕಾಕರಣ ಹೊಂದಲು ಹೆಚ್ಚು ಲಸಿಕಾಕರಣ ತಂಡಗಳನ್ನು ನಿಯೋಜಿಸುವಂತೆ ತಿಳಿಸಲಾಗಿದೆ. ಹೆಚ್ಚು ಜನ ಸೇರುವ ಪ್ರದೇಶಗಳಾದ ಮಾರುಕಟ್ಟೆ/ಸಂತೆಗಳಲ್ಲಿ ಲಸಿಕಾಕರಣದ ಕುರಿತು ಜಾಗೃತಿ ಮೂಡಿಸುವುದು ಮತ್ತು ಲಸಿಕಾ ಸೇವೆ ನೀಡುವುದು. ಇನ್ನೂ ಮೊದಲನೇ ಅಥವಾ ಎರಡನೇ ಡೋಸ್ ಲಸಿಕೆ ಪಡೆಯದ ಫಲಾನುಭವಿಗಳನ್ನು ಲಸಿಕೆ ಪಡೆಯಲು ಪ್ರೇರೇಪಿಸಲು ಹಾಗೂ ಸಜ್ಜುಗೊಳಿಸಲು ಪ್ರಭಾವಿ ವ್ಯಕ್ತಿಗಳನ್ನು (ಧಾರ್ಮಿಕ ಗುರುಗಳು, ಸಮುದಾಯ ಮುಖಂಡರು, ಪ್ರಖ್ಯಾತ ವೈದ್ಯರು, ಚುನಾಯಿತ ಪ್ರತಿನಿಧಿಗಳು, ಪ್ರಖ್ಯಾತ ಆಟಗಾರರು) ಹಾಗೂ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಸದಸ್ಯರನ್ನು ಬಳಸಿಕೊಳ್ಳುವಂತೆಯೂ ಸೂಚಿಸಿದೆ.‌

ಇದನ್ನು ಓದಿ:Watch: ಕೋವ್ಯಾಕ್ಸಿನ್​ ಲಸಿಕೆ ವೇಷ ಧರಿಸಿ ಪುಟ್ಟ ಪೋರಿಯ ಮುದ್ದು ಮಾತು ಕೇಳಿ..

ABOUT THE AUTHOR

...view details