ಬೆಂಗಳೂರು :ಮೇ 4ರಿಂದ ರಾಜ್ಯದಲ್ಲೂ ಲಾಕ್ಡೌನ್ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಸಡಿಲಿಕೆ ಮಾರ್ಗಸೂಚಿಯನ್ನೇ ಯಥಾವತ್ತಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ರಾಜ್ಯದಲ್ಲೂ ಲಾಕ್ಡೌನ್ 3.O ಎರಡು ವಾರ ಮುಂದುವರಿಯಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಗ್ರೀನ್ ಝೋನ್, ಆರೆಂಜ್ ಝೋನ್ ಮತ್ತು ರೆಡ್ ಝೋನ್ಗಳಲ್ಲಿ ಕೆಲ ನಿರ್ಬಂಧಗಳನ್ನು ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಯಥಾವತ್ತಾಗಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ. ಮೂರು ಝೋನ್ಗಳಲ್ಲೂ ರಾಜ್ಯ ಸರ್ಕಾರ ಕೇಂದ್ರದ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಅದನ್ನೇ ಯಥಾವತ್ತಾಗಿ ಅನುಷ್ಠಾನ ಮಾಡಿದೆ.
ರಾಜ್ಯ ಸರ್ಕಾರದ ಮಾರ್ಗಸೂಚಿಯನ್ವಯ ಎಲ್ಲಾ ಝೋನ್ಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಕೈಗಾರಿಕೆ, ನಿರ್ಮಾಣ ಕಾಮಗಾರಿ, ಕೃಷಿ ಚಟುವಟಿಕೆ, ಅಗತ್ಯ ಸೇವೆಗಳು, ಅಂಗಡಿ ಮುಂಗಟ್ಟುಗಳಿಗೆ ಯಥಾವತ್ ಅವಕಾಶ ನೀಡಲಾಗಿದೆ. ಉಳಿದಂತೆ ಅಂತಾರಾಜ್ಯ ಗೂಡ್ಸ್ ಲಾರಿಗಳ ಸಂಚಾರ, ಕೃಷಿ ಸಾಮಾಗ್ರಿಗಳನ್ನು ಹೊತ್ತೊಯ್ಯುವ ವಾಹನ, ತರಕಾರಿ ವಾಹನ, ಮೀನುಗಾರಿಕೆ, ಪಶುಸಂಗೋಪನೆ ಸಂಬಂಧ ಚಟುವಟಿಕೆಗಳಿಗೆ ಈ ಹಿಂದಿನಂತೆ ಅವಕಾಶ ನೀಡಲಾಗಿದೆ.
ಗ್ರೀನ್ ಝೋನ್ಗಳಲ್ಲಿ ಯಾವುದಕ್ಕೂ ನಿರ್ಬಂಧಗಳಿರಲ್ಲ. ಶೇ. 50%ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಟ್ಯಾಕ್ಸಿ, ಆಟೋಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಕಾರಿನಲ್ಲಿ ಚಾಲಕ ಸೇರಿ ಮೂವರಿಗೆ ಅವಕಾಶ ನೀಡಲಾಗಿದೆ. ಗ್ರೀನ್ ಝೋನ್ನಲ್ಲಿ ದ್ವಿಚಕ್ರವಾಹನದಲ್ಲಿ ಇಬ್ಬರು ಕೂತು ಸಂಚಾರ ನಡೆಸಬಹುದಾಗಿದೆ.
ಪಾರ್ಸಲ್ ಮೂಲಕ ಮದ್ಯ ಮಾರಾಟಕ್ಕೆ ಅಸ್ತು :ಗ್ರೀನ್ ಮತ್ತು ಆರೆಂಜ್ ವಲಯದಲ್ಲಿ ನಿಯಮದ ಪ್ರಕಾರ ಪಾರ್ಸೆಲ್ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಅಬಕಾರಿ ಇಲಾಖೆಗೆ ಮದ್ಯ ಮಾರಾಟಕ್ಕೆ ಕೆಲವು ನಿರ್ಬಂಧ ವಿಧಿಸಲಿದೆ. ಬೆಂಗಳೂರಿನ ಸೀಲ್‌ಡೌನ್ ಮತ್ತು ನಿರ್ಬಂಧಿತ ಪ್ರದೇಶದಲ್ಲಿ ಮದ್ಯ ಮಾರಾಟ ಇರುವುದಿಲ್ಲ. ಉಳಿದಂತೆ ಬೆಂಗಳೂರಿನಲ್ಲಿ ಪಾರ್ಸೆಲ್ ಮೂಲಕ ಮಾರಾಟಕ್ಕೆ ಅವಕಾಶ ನೀಡಲಾಗುವುದು. ಈ ಬಗ್ಗೆ ಸಿಎಂ ನಿರ್ದೇಶನದಂತೆ ಅಬಕಾರಿ ಇಲಾಖೆ ಮಾರ್ಗಸೂಚಿ ಪ್ರಕಟಿಸಲಿದೆ.
ಯಾವುದಕ್ಕೆ ಸಂಪೂರ್ಣ ನಿರ್ಬಂಧ? :ಅಂತಾರಾಜ್ಯ ಓಡಾಟಕ್ಕೆ ನಿಷೇಧ- ವಿಮಾನ ಹಾರಾಟ, ಮೆಟ್ರೋ ಸಂಚಾರ ನಿಷೇಧ- ಶಾಲಾ, ಕಾಲೇಜುಗಳಿಗೆ ನಿಷೇಧ- ಸಭೆ, ಸಮಾರಂಭಗಳಿಗೆ ನಿಷೇಧ- ದೇವಸ್ಥಾನ, ಧಾರ್ಮಿಕ ಸಭೆಗಳಿರಲ್ಲ- ಮಾಲ್, ಸಿನಿಮಾ ಹಾಲ್ಗಳಿಗೆ ನಿಷೇಧ- ಹೇರ್ ಸಲೂನ್, ಜಿಮ್, ಸ್ಪಾಗಳಿಗೆ ನಿಷೇಧವಿದೆ.