ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಿಗಮ-ಮಂಡಳಿಗಳಿಗೆ ಅಧಿಕಾರೇತರ ಸದಸ್ಯರು ಹಾಗೂ ನಿರ್ದೇಶಕರನ್ನು ನಾಮನಿರ್ದೇಶನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳವಾರ 33 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಮುಂದುವರಿದ ಭಾಗವಾಗಿ ನಿಗಮ-ಮಂಡಳಿಗಳಿಗೆ ಅಧಿಕಾರೇತರ ಸದಸ್ಯರು ಹಾಗೂ ನಿರ್ದೇಶಕರು ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ.
ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ವ್ಯಾಪ್ತಿಯಲ್ಲಿ ಬರುವ 5 ನಿಗಮಗಳಿಗೆ ನಾಮನಿರ್ದೇಶನಗೊಂಡ ಸದಸ್ಯರನ್ನು ಗಮನಿಸುವುದಾದರೆ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕರ್ನಾಟಕ ದ್ರಾಕ್ಷಾರಸ ಮಂಡಳಿ ಬೆಂಗಳೂರು ವಿಭಾಗಕ್ಕೆ ಕೋಲಾರ ಜಿಲ್ಲೆಯ ಅಭಿಲಾಶ್ ಕಾರ್ತಿಕ್, ರೇಷ್ಮೆ ಮಾರಾಟ ಮಂಡಳಿ ನಿಯಮಿತ, ಬೆಂಗಳೂರು ಇಲ್ಲಿಗೆ ಚಿಕ್ಕಬಳ್ಳಾಪುರ ಶಿಡ್ಲಘಟ್ಟದ ಮಂಜುನಾಥ್ ಬಿ., ದಿ ನರ್ಸರಿ ಮೆನ್ ಕೋ-ಆಪರೇಟಿವ್ ಸೊಸೈಟಿ ಬೆಂಗಳೂರು ಇಲ್ಲಿಗೆ ನಂದನ್ ಡಿ.ಜೆ. ಹಾಗೂ ವೆಂಕಟೇಶ್ ಕೆ., ವಿಜಯಪುರ ಜಿಲ್ಲೆಯ ಇಂಡಿಯಲ್ಲಿರುವ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಗೆ ಶಂಕರಗೌಡ ಬಿರಾದಾರ್ ರನ್ನು ನೇಮಿಸಲಾಗಿದೆ.
ಇಂಧನ ಇಲಾಖೆ ಅಡಿ ಕೆಪಿಟಿಸಿಎಲ್ಗೆ ಪ್ರಶಾಂತ್ ಮಾಕನೂರು ಹಾಗೂ ಮಹಾದೇವ ಶಿವಪ್ಪ ಅಳಗವಾಡಿ, ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮಕ್ಕೆ ಶರತ್ಚಂದ್ರ ಸುನೀಲ್ ಬಿ ಹಾಗೂ ಸಿ ಟಿ ಮಂಜುನಾಥ್, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ ಕಿಶೋರ್ ಬಿಆರ್ ಹಾಗೂ ಪ್ರವೀಣ್ ಹೆಗಡೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರು ಇಲ್ಲಿಗೆ ಮಹದೇವಸ್ವಾಮಿ ಎಲ್.ಆರ್. ಹಾಗೂ ಗುರುಪ್ರಸಾದ್ ಬಿ., ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮಕ್ಕೆ ಅಣ್ಣಾಸಾಹೇಬ ಅಪ್ಪಾಸಾಹೇಬ ದೇಸಾಯಿ ನೇಮಕಗೊಂಡಿದ್ದಾರೆ.