ಕರ್ನಾಟಕ

karnataka

ETV Bharat / state

ವರ್ಚುವಲ್ ರ‍್ಯಾಲಿ ಸಮಾವೇಶಕ್ಕೆ ಸಿದ್ಧತೆ... ಆನ್​ಲೈನ್​ನಲ್ಲೇ ನಡೆದ ಪೂರ್ವಸಿದ್ಧತಾ ಸಭೆ...! - ಬಿಜೆಪಿ ವರ್ಚುವಲ್​ ರ‍್ಯಾಲಿ ಸುದ್ದಿ,

ರಾಜ್ಯ ಸರ್ಕಾರದ ಒಂದು‌ ವರ್ಷದ ಸಾಧನಾ ಸಮಾವೇಶವನ್ನು ವರ್ಚುವಲ್ ರ‍್ಯಾಲಿ ಮೂಲಕ ಆಯೋಜನೆ ಮಾಡಲು ಬಿಜೆಪಿ ನಿರ್ಧರಿಸಿದೆ.

BJP one year achievement conference, BJP one year achievement conference meeting, Virtual Rally, bjp held Virtual Rally, BJP Virtual Rally news, ಒಂದು‌ ವರ್ಷದ ಸಾಧನಾ ಸಮಾವೇಶ, ಒಂದು‌ ವರ್ಷದ ಸಾಧನಾ ಸಮಾವೇಶ ಸಭೆ, ವರ್ಚುವಲ್​ ರ‍್ಯಾಲಿ, ಬಿಜೆಪಿ ವರ್ಚುವಲ್​ ರ‍್ಯಾಲಿ, ಬಿಜೆಪಿ ವರ್ಚುವಲ್​ ರ‍್ಯಾಲಿ ಸುದ್ದಿ,
ವರ್ಚುವಲ್ ರ‍್ಯಾಲಿ ಸಮಾವೇಶಕ್ಕೆ ಸಿದ್ಧತೆ

By

Published : Jul 24, 2020, 4:36 AM IST

ಬೆಂಗಳೂರು:ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನಾ ಸಮಾವೇಶವನ್ನು ವರ್ಚುವಲ್ ರ‍್ಯಾಲಿ ಮೂಲಕ ಆಯೋಜನೆ ಮಾಡಿದಂತೆಯೇ ರಾಜ್ಯ ಸರ್ಕಾರದ ಒಂದು‌ ವರ್ಷದ ಸಾಧನಾ ಸಮಾವೇಶವನ್ನು ವರ್ಚುವಲ್ ರ‍್ಯಾಲಿ ಮೂಲಕ ಆಯೋಜನೆ ಮಾಡಲು ರಾಜ್ಯ ಬಿಜೆಪಿ ನಿರ್ಧರಿಸಿದೆ.

ಕೊರೊನಾ ಹಿನ್ನಲೆ ಯಾವುದೇ ರಾಜಕೀಯ ಸಭೆ ಸಮಾರಂಭಗಳಿಗೆ ಅನುಮತಿ ಇಲ್ಲದೇ ಇರುವುದು ಹಾಗು ಸಮಾವೇಶ ನಡೆಸಲು ಪೂರಕ ವಾತಾವರಣ ಇಲ್ಲದೇ ಇರುವುದರಿಂದ ವರ್ಚುವಲ್ ರ‍್ಯಾಲಿಗೆ ಬಿಜೆಪಿ ಮುಂದಾಗಿದೆ. ಜುಲೈ 26 ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಅಂದು ವರ್ಚುವಲ್ ರ‍್ಯಾಲಿ ಮೂಲಕ ಸಮಾವೇಶ ನಡೆಸಿ ಸರ್ಕಾರದ ಸಾಧ‌ನೆಯನ್ನು ಜನರ ಮುಂದಿಡುವ ಚಿಂತನೆ ನಡೆಸಿದೆ.

ಆನ್​ಲೈನ್​ನಲ್ಲೇ ಸಭೆ!

ಮುಖ್ಯಮಂತ್ರಿ ಬಿ. ಎಸ್.‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆ ಹಮ್ಮಿಕೊಳ್ಳಲಾಗುತ್ತಿರುವ ವರ್ಚುವಲ್‌ ಸಮಾವೇಶದ ಕುರಿತು ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಡಿಯೋ ಸಂವಾದ ನಡೆಸುವ ಮೂಲಕ ಪೂರ್ವಸಿದ್ಧತಾ ಸಭೆ ನಡೆಸಿದರು.

ಭಾನುವಾರ ಸರ್ಕಾರದ ವತಿಯಿಂದ ವಿಧಾನಸೌಧದಲ್ಲಿ ಸಾಂಕೇತಿಕವಾಗಿ ಸರಳ ಸಮಾರಂಭದ ಮೂಲಕ ಸರ್ಕಾರದ ಸಾಧನಾ ಕಿರುಹೊತ್ತಿಗೆ ಬಿಡುಗಡೆಯಾಗಲಿದೆ. ಅಂದೇ ಬಿಜೆಪಿವತಿಯಿಂದ ವರ್ಚುವಲ್ ರ‍್ಯಾಲಿ ಸಮಾವೇಶ ದೊಡ್ಡ ಮಟ್ಟದಲ್ಲಿ ನಡೆಯಲಿದೆ.

ABOUT THE AUTHOR

...view details