ಕರ್ನಾಟಕ

karnataka

ETV Bharat / state

ಸಾಲ..ಸಾಲ..ಸಾಲ.. ಕಳೆದ 10 ವರ್ಷಗಳಿಂದ ರಾಜ್ಯ ಸರ್ಕಾರಗಳು ಯಾವ ರೀತಿ ಸಾಲ ಮಾಡಿವೆ ನೋಡಿ! - ಹತ್ತು ವರ್ಷಗಳಿಂದ ರಾಜ್ಯದ ಸಾಲದ ವಿವರ

ಸಾಲ..ಸಾಲ...ಸಾಲ... ಕಳೆದ 10 ವರ್ಷಗಳಿಂದ ರಾಜ್ಯ ಸರ್ಕಾರಗಳು ಯಾವ ರೀತಿ ಸಾಲದ ಮೇಲೆ ಸಾಲ ಮಾಡುತ್ತಿದೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ..

state government loan, state government loan details from last ten years, Karnataka state government loan news, ರಾಜ್ಯ ಸರ್ಕಾರದ ಸಾಲ, ಹತ್ತು ವರ್ಷಗಳಿಂದ ರಾಜ್ಯದ ಸಾಲದ ವಿವರ, ಕರ್ನಾಟಕ ರಾಜ್ಯದ ಸಾಲದ ಸುದ್ದಿ
ರಾಜ್ಯ ಸರ್ಕಾರಗಳು ಯಾವ ರೀತಿ ಸಾಲದ ಮೇಲೆ ಸಾಲ ಮಾಡುತ್ತಿದೆ

By

Published : Mar 8, 2022, 1:27 PM IST

Updated : Mar 8, 2022, 2:32 PM IST

ಬೆಂಗಳೂರು:ಕರ್ನಾಟಕ ವರ್ಷಂಪ್ರತಿ ಸಾಲದ ಸುಳಿಗೆ ಸಿಲುಕುತ್ತಾ ಇದೆ. 2022-23 ಸಾಲಿನಲ್ಲಿ ರಾಜ್ಯದ ಸಾಲದ ಹೊರೆ 5,18,366 ಕೋಟಿ ರೂ. ತಲುಪಲಿದೆ. ಅಷ್ಟಕ್ಕೂ ಕಳೆದ 10 ವರ್ಷಗಳಲ್ಲಿ ರಾಜ್ಯದ ಸಾಲದ ಹಾದಿ ಹೇಗಿದೆ ಎಂಬ ವರದಿ ಇಲ್ಲಿದೆ.

ರಾಜ್ಯ ಸರ್ಕಾರಗಳು ಯಾವ ರೀತಿ ಸಾಲದ ಮೇಲೆ ಸಾಲ ಮಾಡುತ್ತಿದೆ

ಸಾಲ ಮಾಡಿ ಆದ್ರೂ ತುಪ್ಪ ತಿನ್ನು ಎಂಬಂತೆ ಆಗಿದೆ ಸರ್ಕಾರದ ಸದ್ಯದ ಸ್ಥಿತಿ. ರಾಜ್ಯದ ಹಣಕಾಸು ನಿರ್ವಹಣೆಗೆ ರಾಜ್ಯ ಸರ್ಕಾರ ಸಾಲವನ್ನೇ ಬಹುವಾಗಿ ನೆಚ್ಚಿಕೊಳ್ಳಬೇಕಾಗಿದೆ.‌ ಆದಾಯ ಮೂಲಗಳು ಬರಿದಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಪ್ರತಿ ವರ್ಷ ತನ್ನ ಸಾಲದ ಹೊರೆಯನ್ನು ಹೆಚ್ಚಿಸುತ್ತಲೇ ಇದೆ.‌ ಸಾಲದ ಮೂಲಕವೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ.

ಅದರಲ್ಲೂ ಕೋವಿಡ್ ಬಂದ ಬಳಿಕ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದ ಗೆಟ್ಟಿರುವ ಕಾರಣ ಸಾಲವೇ ರಾಜ್ಯಕ್ಕೆ ಸದ್ಯ ಇರುವ ಆಯ್ಕೆ. ವರ್ಷಂಪ್ರತಿ ರಾಜ್ಯ ಸರ್ಕಾರಗಳು ಸಾಲ ಪ್ರಮಾಣವನ್ನು ಏರಿಕೆ ಮಾಡುತ್ತಲೇ ಇದ್ದು, ರಾಜ್ಯವನ್ನು ಸಾಲದ ಸುಳಿಗೆ ಕೊಂಡೊಯ್ಯುತ್ತಿದೆ.

ಕಳೆದ 10 ವರ್ಷಗಳಲ್ಲಿ ರಾಜ್ಯದ ಸಾಲದ ಹಾದಿ:

  • 2010-11: ಸಾಲ- 6,714 ಕೋಟಿ ರೂ.
  • 2011-12: ಸಾಲ- 9,358 ಕೋಟಿ ರೂ.
  • 2012-13: ಸಾಲ- 13,465 ಕೋಟಿ ರೂ.
  • 2013-14: ಸಾಲ- 17,287 ಕೋಟಿ ರೂ.
  • 2014-15: ಸಾಲ- 21,875 ಕೋಟಿ ರೂ.
  • 2015-16: ಸಾಲ- 21,072 ಕೋಟಿ ರೂ.
  • 2016-17: ಸಾಲ- 31,156 ಕೋಟಿ ರೂ.
  • 2017-18: ಸಾಲ- 35,122 ಕೋಟಿ ರೂ.
  • 2018-19: ಸಾಲ- 41,914 ಕೋಟಿ ರೂ.
  • 2019-20: ಸಾಲ- 50,459 ಕೋಟಿ ರೂ.
  • 2020-21: ಸಾಲ- 72,121 ಕೋಟಿ ರೂ.

ಮುಂದೆ ರಾಜ್ಯದ ಮೇಲಾಗುವ ಸಾಲದ ಹೊರೆ:2015-16ರಲ್ಲಿ ರಾಜ್ಯ ಒಟ್ಟು 1,83,322 ಕೋಟಿ ರೂ‌ ಸಾಲದ ಹೊರೆ ಹೊಂದಿತ್ತು. 2016-17ರಲ್ಲಿ 2,21,319 ಕೋಟಿ ರೂ. ಸಾಲದ ಭಾರ ಹೊಂದಿದೆ. 2017-18ರಲ್ಲಿ ಸಾಲದ ಹೊಣೆಗಾರಿಕೆ 2,46,231 ಕೋಟಿ ರೂ. ಆಗಿತ್ತು. 2018-19ನೇ ಸಾಲಿನಲ್ಲಿ ಸಾಲದ ಹೊರೆ 2,85,238 ಕೋಟಿ ರೂ. ಇತ್ತು. ಅದೇ 2019-20ರಲ್ಲಿ ಒಟ್ಟು ಸಾಲದ ಹೊರೆ 3,37,520 ಕೋಟಿ ರೂ‌. ಇತ್ತು.

2020-21ರಲ್ಲಿ ಒಟ್ಟು ರಾಜ್ಯದ ಸಾಲದ ಹೊರೆ 4,03,520 ಕೋಟಿ ರೂ. ಆಗಿತ್ತು. ಅದೇ 2021-22ರಲ್ಲಿ ರಾಜ್ಯ ಹೊರೆ 4,58,042 ಕೋಟಿ ರೂ. ಆಗಿದೆ. 2022-23ನೇ ಸಾಲಿನಲ್ಲಿ ರಾಜ್ಯ 5,18,366 ಕೋಟಿ ರೂ.‌ತಲುಪಲಿದೆ. ಅದೇ 2023-24ಕ್ಕೆ ರಾಜ್ಯದ ಋಣ ಭಾರ 5,91,977 ಕೋಟಿ ರೂ. ಆಗಲಿದೆ. 2024-25 ಸಾಲಿನಲ್ಲಿ ರಾಜ್ಯದ ಒಟ್ಟು ಹೊಣೆಗಾರಿಕೆ ಅಂದಾಜು 6,60,766 ಕೋಟಿ ರೂ. ತಲುಪಲಿದೆ. ಇನ್ನು 2025-26 ಸಾಲಿನಲ್ಲಿ ಒಟ್ಟು ಹೊಣೆಗಾರಿಕೆ 7,38,510 ಕೋಟಿ ರೂ. ತಲುಪಲಿದೆ ಎಂದು ಅಂದಾಜಿಸಲಾಗಿದೆ.

Last Updated : Mar 8, 2022, 2:32 PM IST

ABOUT THE AUTHOR

...view details