ಕರ್ನಾಟಕ

karnataka

ಅಗತ್ಯ ರೆಮ್​ಡಿಸಿವಿರ್ ಔಷಧ ಪೂರೈಸದ ಎರಡು ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ ನೋಟಿಸ್

By

Published : May 11, 2021, 9:26 PM IST

ಕೇಂದ್ರ ಸರ್ಕಾರ ನಿರ್ದೇಶಿತ ಅಗತ್ಯ ಪ್ರಮಾಣದ ರೆಮ್​ಡಿಸಿವಿರ್ ಔಷಧವನ್ನು ಪೂರೈಸದ ಹಿನ್ನೆಲೆ ಜುಬಿಲಿಯಂಟ್ ಜನರಿಕ್ ಸಂಸ್ಥೆ ಹಾಗೂ ಸಿಪ್ಲಾ ಸಂಸ್ಥೆಗೆ ರಾಜ್ಯ ಸರ್ಕಾರ ನೋಟಿಸ್​ ನೀಡಿದೆ.

notice
notice

ಬೆಂಗಳೂರು:ಅಗತ್ಯ ರೆಮ್​ಸಿವಿರ್ ಔಷಧ ಪೂರೈಸದ ಜುಬಿಲಿಯಂಟ್ ಜನರಿಕ್ ಸಂಸ್ಥೆ ಹಾಗೂ ಸಿಪ್ಲಾ ಸಂಸ್ಥೆಗೆ ರಾಜ್ಯ ಸರ್ಕಾರ‌ ನೋಟಿಸ್​ ಜಾರಿ ಮಾಡಿದೆ.

24 ಗಂಟೆಯೊಳಗೆ ರಾಜ್ಯಕ್ಕೆ ಹಂಚಿಕೆಯಾಗಿರುವ ರೆಮ್​ಡಿಸಿವಿರ್ ಔಷಧವನ್ನು ಸರಬರಾಜು ಮಾಡುವಂತೆ ಖಡಕ್ ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಕುಂಬಳಗೋಡಿನಲ್ಲಿರುವ ಜುಬಿಲಿಯಂಟ್ ಸಂಸ್ಥೆ ಹಾಗೂ ಪೀಣ್ಯದಲ್ಲಿರುವ ಸಿಪ್ಲಾ ಸಂಸ್ಥೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ನೋಟಿಸ್ ನೀಡಿದ್ದಾರೆ.

ರಾಜ್ಯಕ್ಕೆ 32,000 ವಯಲ್ಸ್ ರೆಮ್​ಡಿಸಿವಿರ್ ಔಷಧವನ್ನು ಮೇ 9ರೊಳಗೆ ಪೂರೈಕೆ ಮಾಡುವಂತೆ ಜುಬಿಲಿಯಂಟ್ ಸಂಸ್ಥೆಗೆ ಕೇಂದ್ರ ಸರ್ಕಾರ ಮೇ 1 ರಂದು ನಿರ್ದೇಶನ ನೀಡಿತ್ತು. ಆದರೆ ಮೇ 8ಕ್ಕೆ ಸಂಸ್ಥೆ ಕೇವಲ 17,601 ವಯಲ್ಸ್ ನ್ನು ಮಾತ್ರ ಸರಬರಾಜು ಮಾಡಿದೆ. ಕೇಂದ್ರ ಸರ್ಕಾರ ನಿರ್ದೇಶಿತ ಅಗತ್ಯ ಪ್ರಮಾಣದ ಔಷಧವನ್ನು ಪೂರೈಕೆ ಮಾಡಿಲ್ಲ. ಅದೇ ರೀತಿ ಸಿಪ್ಲಾ ಸಂಸ್ಥೆಗೆ 30,000 ವಯಲ್ಸ್ ರೆಮ್ಡಿಸಿವಿರ್ ಔಷಧ ನೀಡಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ಆದರೆ ಈವರೆಗೆ 10,840 ರೆಮ್​ಡಿಸಿವಿರ್ ವಯಲ್ಸ್ ನ್ನು ಪೂರೈಕೆ ಮಾಡಿದೆ. ಇದರಿಂದ ಕೊರೊನಾ ರೋಗಿಗಳ ಜೀವಕ್ಕೆ ಅಪಾಯ ಎದುರಾಗಿದೆ ಎಂದು ನೋಟಿಸ್​ನಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಅಗತ್ಯ ಪ್ರಮಾಣದ ರೆಮ್​ಡಿಸಿವಿರ್ ನ್ನು ಸರಬರಾಜು ಮಾಡದೇ ಇರುವುದರಿಂದ ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಮಸ್ಯೆ ಎದುರಾಗಿದೆ. ಸಂಸ್ಥೆಗಳ ಈ ಕ್ರಮ ಕೇಂದ್ರ ಸರ್ಕಾರ ನಿರ್ದೇಶನದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ABOUT THE AUTHOR

...view details