ಬೆಂಗಳೂರು:ವಿದ್ಯುತ್ ಅಪಘಾತ ಪ್ರಕರಣಗಳ ತನಿಖಾ ಸಮಿತಿ ರಚಿಸಿರುವ ರಾಜ್ಯ ಸರ್ಕಾರ ಅಪಘಾತ ತಡೆಯುವ ಕ್ರಮಗಳ ಕುರಿತು ಸುತ್ತೋಲೆ ಹೊರಡಿಸಿದೆ. ನವೆಂಬರ್ 19ರಂದು ಕಾಡುಗೋಡಿ 66/11 ಕೆವಿ ಉಪಕೇಂದ್ರದ F9 Feederನ ವಿದ್ಯುತ್ ವಾಹಕ ತುಂಡಾಗಿ ಬಿದ್ದ ಕಾರಣ ಅದನ್ನು ತುಳಿದು ಪಾದಚಾರಿ ಮಹಿಳೆ ಮತ್ತು ಮಗು ವಿದ್ಯುತ್ ಅಪಘಾತಕ್ಕೊಳಗಾಗಿ ಮೃತಪಟ್ಟಿರುವ ಬಗ್ಗೆ ವಿದ್ಯುತ್ ಪರಿವೀಕ್ಷಣಾ ಅಧಿಕಾರಿಗಳು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ.
ಈ ಘಟನೆಯು ಅತ್ಯಂತ ದುರದೃಷ್ಟಕರವಾಗಿದ್ದು, ಇಂತಹ ಅಪಘಾತಗಳಲ್ಲಿ ಜೀವಹಾನಿ ಆಗುತ್ತಿರುವ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದಲ್ಲಿ ಸುರಕ್ಷತಾ ಕ್ರಮಗಳ ನಿರ್ಲಕ್ಷತೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇಂತಹ ಘಟನೆಗಳು ಆಗದಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಮತ್ತು ವಿದ್ಯುತ್ ಪ್ರಸರಣ ನಿಗಮಗಳು ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕೆಳಕಂಡ ನಿರ್ದೇಶನಗಳನ್ನು ಸರ್ಕಾರ ನೀಡಿದೆ.
1.ವಿದ್ಯುತ್ ಅಪಘಾತಗಳನ್ನು ತಡೆಯುವ ಬಗ್ಗೆ ಕಂಪನಿಗಳ ಎಲ್ಲಾ ಹಂತದ ಅಧಿಕಾರಿಗಳು ಮತ್ತು ನೌಕರರು/ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ Substation Staffಗೆ ತಿಳುವಳಿಕೆಯ ತರಬೇತಿಯನ್ನು ಕಡ್ಡಾಯವಾಗಿ ನೀಡುವುದು.
2. ವಿದ್ಯುತ್ ಅಪಘಾತಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವ್ಯಾಪಕ ಪ್ರಚಾರ ನಡೆಸುವುದು ಹಾಗೂ ಟೆಲಿವಿಷನ್, ರೇಡಿಯೋ, ಸೋಷಿಯಲ್ ಮೀಡಿಯ, ವಾರ್ತಾಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು.
3)ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಅಧಿಕಾರಿಗಳು Safety Regulations ಪ್ರಕಾರ ಕಾಲಕಾಲಕ್ಕೆ ಪರಿಶೀಲನೆಯನ್ನು ಪರಿಣಾಮಕಾರಿಯಾಗಿ ನಡೆಸಿ, ನ್ಯೂನತೆಗಳನ್ನು Hazardous Locations/Safe clearances & voi w ಮಾಹಿತಿಯನ್ನು ವಿಸಕಂ/ಕವಿಪ್ರನಿನಿಗೆ ಸಲ್ಲಿಸಿ, ಪ್ರತಿಯನ್ನು ಇಂಧನ ಇಲಾಖೆಗೆ ಸಲ್ಲಿಸುವುದು.
4.ಎಲ್ಲಾ ವಿ.ಸ.ಕಂಗಳಲ್ಲಿ Uniform Standard Operating Procedure ಅನ್ನು ಅಳವಡಿಸುವ ಸಂಬಂಧ ವ್ಯವಸ್ಥಾಪಕ ನಿರ್ದೇಶಕರು, ಕವಿಪ್ರನಿನಿ ರವರ ಅಧ್ಯಕ್ಷತೆಯಲ್ಲಿ ರಚಿಸಿರುವ “ಸಮನ್ವಯ ಸಮಿತಿ” ಯಲ್ಲಿ ಕೂಲಂಕಷವಾಗಿ ಚರ್ಚಿಸಿ, ಮಾರ್ಗಸೂಚಿಗಳನ್ನು ಹೊರಡಿಸಿ ಅನುಷ್ಠಾನಗೊಳಿಸುವುದು.
5)ವಿದ್ಯುತ್ ಜಾಲದ ಮತ್ತು ಉಪಕರಣಗಳ ಕಾಲಕಾಲದ ಸಮರ್ಪಕ ನಿರ್ವಹಣೆಯನ್ನು KERC/KPTCL & Safety Manual Fwಗೆ ಮೇಲ್ವಿಚಾರಣೆಯನ್ನು ಎಲ್ಲಾ ಹಂತದ ಕಛೇರಿಗಳಲ್ಲಿ ಹಾಗೂ ನಿಗಮ ಮಟ್ಟದಲ್ಲಿ ಪರಿಶೀಲಿಸುವುದು.
6)ವಿದ್ಯುತ್ ಪರಿವೀಕ್ಷಕರು, RT/R&D/TAQC/Hot Lines ಕವಿಪ್ರನಿನಿ ಮತ್ತು ವಿಸಕಂಗಳ Quality Standards & Safety Section/HT/LT Rating 9, Inspection by Higher Officers ರವರು ನೀಡಿರುವ Observations ಗಳಿಗೆ ಅನುಸರಣಾ ಕ್ರಮ ವಹಿಸುವುದನ್ನು ನಿಗಮ ಕಛೇರಿಯಲ್ಲಿ ಪರಿಶೀಲಿಸುವುದು.
7)ಉಪಕೇಂದ್ರಗಳ Operatorಗಳು ಯಾವುದೇ 11 ಕೆವಿ ಮಾರ್ಗಗಳು Double OCR & EFR/EFR ಮೂಲಕ ಟ್ರಿಪ್ ಆದಾಗ ಸಂಬಂಧಪಟ್ಟ ಶಾಖಾಧಿಕಾರಿ/ಉಪವಿಭಾಗಾಧಿಕಾರಿ ರವರನ್ನು ಸಂಪರ್ಕಿಸಿ, ಅವರ ಸಹಮತದೊಂದಿಗೆ ಮಾರ್ಗಗಳ Test Charge ಮಾಡತಕ್ಕದ್ದು. ಈ ನಿಟ್ಟಿನಲ್ಲಿ ಪ್ರತಿ ಉಪಕೇಂದ್ರಗಳ Operatorಗಳು ಸದರಿ ವಿಷಯದ ಬಗ್ಗೆ ಮಾಹಿತಿಯನ್ನು ಹೊಂದಿರುವುದನ್ನು ಆಯಾ ಕ್ಷೇತ್ರದ ನೋಡಲ್ ಅಧಿಕಾರಿ/Substation maintenance head ರವರು ಖಾತ್ರಿಪಡಿಸಿಕೊಳ್ಳುವುದು.
8)ಪ್ರತಿ ವಿಸಕಂಗಳ ಮಟ್ಟದಲ್ಲಿ ಕವಿಪ್ರನಿನಿ ಅಧಿಕಾರಿಗಳನ್ನು ಒಳಗೊಂಡಂತೆ ತಿಂಗಳಿಗೊಮ್ಮೆ Safety Day ಕಾರ್ಯಕ್ರಮವನ್ನು ಹಮ್ಮಿಕೊಂಡು Best Practices ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡು ಅಳವಡಿಸಿಕೊಳ್ಳುವುದು. ನಿಗಮ ಮಟ್ಟದಲ್ಲಿ ಈ ಪ್ರಕ್ರಿಯೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ ನಡೆಸುವುದು.
ಈ ಮೇಲಿನ ಅಂಶಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು, ಪ್ರತಿ ವಿಸಕಂಗಳ ವ್ಯವಸ್ಥಾಪಕ ನಿರ್ದೇಶಕರು/ನಿರ್ದೇಶಕರು (ತಾಂತ್ರಿಕ) ತಮ್ಮ ವೈಯಕ್ತಿಕ ಗಮನದೊಂದಿಗೆ ವಿದ್ಯುತ್ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯವಹಿಸಲು ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ತೋರುವ ಅಧಿಕಾರಿ/ನೌಕರರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಸುತ್ತೊಲೆಯಲ್ಲಿ ಸೂಚಿಸಿದೆ.
ತನಿಖಾ ಸಮಿತಿ ರಚನೆ:ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ತೆಗೆದುಕೊಳ್ಳಬೇಕಾದ ಕ್ರಮ ಸೂಚಿಸಲು ತಜ್ಞರ ಉನ್ನತ ಸಮಿತಿ (Expert Committee) ರಚಿಸಲು ಸರ್ಕಾರದಲ್ಲಿ ತೀರ್ಮಾನಿಸಿದೆ. ಈ ಸಮಿತಿಯಲ್ಲಿ ಎಸ್.ಸುಮಂತ್, ನಿವೃತ್ತ ನಿರ್ದೇಶಕರು (ಪ್ರಸರಣ), ಕ.ವಿ.ಪು.ನಿ.ನಿ, ಬಿ.ವಿ.ಗಿರೀಶ್, ಮುಖ್ಯ ಇಂಜಿನಿಯರ್ (ವಿ), ಆರ್‌ಟಿ & ఆರ್ & ಡಿ., ಪ್ರಭಾಕರ್, ಜಂಟಿ ನಿರ್ದೇಶಕರು, ಸಿಪಿಆರ್‌ಐ. ಹಾಗೂ ಜಿ. ರವಿಕುಮಾರ್, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ಪೂರ್ವ ಇದ್ದಾರೆ.
ಜವಾಬ್ದಾರಿ ಏನು?:ವಿದ್ಯುತ್ ಅಪಘಾತದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ, ಘಟನೆಗೆ ಕಾರಣಗಳನ್ನು ನಿಖರವಾಗಿ ಕಂಡುಹಿಡಿಯುವುದು. ಇಂತಹ ಘಟನೆಗಳು ಮರುಕಳಿಸದ ರೀತಿಯಲ್ಲಿ ತೆಗೆದುಕೊಳ್ಳಬಹುದಾದ ಎಲ್ಲಾ ತಾಂತ್ರಿಕ ಸಾಧ್ಯಾಸಾಧ್ಯತೆಗಳ ಬಗ್ಗೆ ಮತ್ತು ವಿದ್ಯುತ್ ಸರಬರಾಜು ಕಂಪನಿಗಳು ಮತ್ತು ಕ.ವಿ.ಪ.ನಿ. ನಿಯಮಿತವು ಕೂಡಲೇ ಅನುಸರಿಸಬೇಕಾದ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ವಿವರವಾಗಿ ವರದಿಯಲ್ಲಿ ನಮೂದಿಸಬೇಕು. ಸದರಿ ವರದಿಯನ್ನು ಈ ಆದೇಶದ ದಿನಾಂಕದಿಂದ ಎರಡು ವಾರದೊಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ವಿದ್ಯುತ್ ತಂತಿ ತುಳಿದು ತಾಯಿ, ಮಗು ಸಾವು: ಸರ್ಕಾರಕ್ಕೆ ಎನ್ಹೆಚ್ಆರ್ಸಿ ನೋಟಿಸ್