ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರವನ್ನು ಬಿಜೆಪಿ ನಡೆಸುತ್ತಿಲ್ಲ‌ ಬದಲಿಗೆ ರೌಡಿಗಳು ನಡೆಸುತ್ತಿದ್ದಾರೆ ಎನಿಸುತ್ತಿದೆ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ - ETv Bharat Kannada news

ವಿಧಾನಸೌಧದಲ್ಲಿ ಕಾಮಗಾರಿ ಖರೀದಿ, ಉದ್ಯೋಗ ಖರೀದಿ, ವರ್ಗಾವಣೆ ವ್ಯಾಪಾರಗಳು ನಡೆಯುತ್ತಿವೆ - ರಾಜ್ಯ ಸರ್ಕಾರವನ್ನು ಬಿಜೆಪಿ ನಡೆಸುತ್ತಿಲ್ಲ‌, ಬದಲಿಗೆ ರೌಡಿ ಎಲೆಮೆಂಟ್ಸ್ ನಡೆಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪ - "ನಾ ಖಾವೂಂಗಾ ನಾ ಖಾನೇದೂಂಗಾ" ಎನ್ನುವ ಮೋದಿ ಮಾತಿನಂತೆ ನಡೆಯುತ್ತೇವೆ ಎನ್ನುವವರು ಈ ಪ್ರಕರಣವನ್ನು ಸಿಬಿಐಗೆ ಕೊಡಲಿ

Congress Party spokesperson, MLA Priyank Kharge
ಕಾಂಗ್ರೆಸ್ ಪಕ್ಷದ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ

By

Published : Jan 6, 2023, 10:51 PM IST

ವಿಧಾನಸೌಧದಲ್ಲಿ ಯಾವುದೇ ಹುದ್ದೆ ಬೇಕಾದರೂ ಮಾರಾಟಕ್ಕೆ ಇದ್ದು, ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಸೆಲ್ಸಮೆನ್ ಆಗಿದ್ದಾರೆ.

ಕಲಬುರಗಿ:ಬಿಜೆಪಿ ಅಂದರೆ ಭಾರತೀಯ ಜನತಾ ಪಕ್ಷ ಅಲ್ಲ ಬ್ರೋಕರ ಜನತಾ ಪಕ್ಷ ವಾಗಿದ್ದು, ವಿಧಾನಸೌಧವನ್ನು ವ್ಯಾಪಾರಸೌಧವಾಗಿ ಮಾಡಿ ಜಗತ್ತಿನ ಅತ್ಯಂತ ದೊಡ್ಡದಾದ ಮಾಲ್ ಆಗಿ ಪರಿವರ್ತನೆ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ ಪಕ್ಷದ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಗೇಲಿ ಮಾಡಿದ್ದಾರೆ‌. ವಿಧಾನಸೌಧದಲ್ಲಿ ಕಾಮಗಾರಿ ಖರೀದಿ, ಉದ್ಯೋಗ ಖರೀದಿ, ವರ್ಗಾವಣೆ ವ್ಯಾಪಾರಗಳು ನಡೆಯುತ್ತಿವೆ. ಇದನ್ನು ನಡೆಸಲು ಬೆಸ್ಟ್ ಸೇಲ್ಸ್​ಮೆನ್​ಗಳು ಕೂಡಾ ಇದ್ದಾರೆ ಎಂದು ಪ್ರೀಯಾಂಕ್ ಖರ್ಗೆ ವ್ಯಂಗ್ಯ ಮಾಡಿದ್ದಾರೆ‌.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ತನ್ನ ಪ್ರಗತಿಪರತೆಗೆ ಹೆಸರಾಗಿತ್ತು, ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದಿಂದ ಕುಖ್ಯಾತಿ ಪಡೆಯುತ್ತಿದೆ. ವಿಧಾನಸೌಧವನ್ನು ವ್ಯಾಪಾರಸೌಧವನ್ನಾಗಿ ಮಾಡಿ ವಿಧಾನಸೌಧದ ಪಾವಿತ್ರತೆ ವೈಭವತೆ ಕಳೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.

ವಿಧಾನಸೌದಾ ಈಗ ಜಗತ್ತಿನ ಅತಿದೊಡ್ಡ ಶಾಪಿಂಗ್ ಮಾಲ್:ವಿಧಾನಸೌದಾದಲ್ಲಿ ಬ್ರೋಕರ್ ಪಕ್ಷ ವಲ್ಡ್ ಬಿಗ್ಗೆಸ್ಟ್ ಶಾಪಿಂಗ್ ಮಾಲ್ ತೆರೆದಿದೆ. ವರ್ಗಾವಣೆ, ಕಾಮಗಾರಿಗಳ ಖರೀದಿ, ಉದ್ಯೋಗ ಮಾರಾಟ ಇಲ್ಲಿ ನಡೆಯುತ್ತದೆ. ಪಿಎಸ್ಐ, ಎಇ, ಜೆಇ, ಯಾವುದೇ ಹುದ್ದೆ ಬೇಕಾದರೂ ಇಲ್ಲಿ ಮಾರಾಟಕ್ಕೆ ಸಿಗುತ್ತವೆ. ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಸೆಲ್ಸಮೆನ್ ಆಗಿದ್ದಾರೆ. ಸಿಎಂ ಹೈಕಮಾಂಡ್ ಗೆ ಮಧ್ಯಮರ್ತಿ,‌ ಎಂಎಲ್ ಎ ಗಳು ಸಚಿವರಿಗೆ ಮಧ್ಯವರ್ತಿಗಳು, ಅಧಿಕಾರಿಗಳು ಎಂಎಲ್‌ಎ ಗಳಿಗೆ ಮಧ್ಯವರ್ತಿಗಳಾಗಿದ್ದಾರೆ. ಜೊತೆಗೆ ಇನ್ನೂ ಕೆಲವು ರೌಡಿಗಳು ಕೂಡಾ ಮಧ್ಯವರ್ತಿಗಳಾಗಿದ್ದಾರೆ. ಇದನ್ನು ನೋಡಿದರೆ ಸಿಎಂ ಸರ್ಕಾರ ನಡೆಸುತ್ತಿದ್ದಾರೆ ಎನಿಸುತ್ತಿಲ್ಲ ಬದಲಿಗೆ ರೌಡಿ ಎಲೆಮೆಂಟ್ಸ್ ನಡೆಸುತ್ತಿದ್ದಾರೆ ಎಂದು ಅನಿಸುತ್ತದೆ ಎಂದು ಪ್ರಿಯಾಂಕ್ ಆರೋಪಿಸಿದರು.

ಸರ್ಕಾರದಲ್ಲಿ ರೌಡಿ ಮೋರ್ಚಾ ಓಪನ್:ಸದ್ಯ ಸರ್ಕಾರದಲ್ಲಿ ರೌಡಿ ಮೋರ್ಚಾ ಓಪನ್ ಮಾಡಿದ್ದಾರೆ. ಸ್ಯಾಂಟ್ರೋ ರವಿ ಎಂಬಾತ ಸಿಎಂಗೆ ಹತ್ತಿರದವನಾಗಿದ್ದಾನೆ. ಈತ ಆಡಿಯೋ ಒಂದರಲ್ಲಿ ತಾನು ಅಧಿಕಾರಿಗಳ ವರ್ಗಾವಣೆ ಮಾಡಿಸುತ್ತೇನೆ ಎಂದಿದ್ದಾನೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ತನಿಖೆ ಮಾಡಿಸಬೇಕು. ಒಬ್ಬ ಎಂಎಲ್‌ಎ‌, ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆ ರೋಲ್ ಕಾಲ್ ಮಾಡಿದ್ದಾರೆ. ಇತ್ತೀಚಿಗೆ ಒಬ್ಬ ಜೆಇ ಹತ್ತು ಲಕ್ಷ ಹಣದ ಬ್ಯಾಗ್ ನೊಂದಿಗೆ ವಿಧಾನಸೌದಾ ಪ್ರವೇಶ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ. ಇವರಿಗೆ ಅದು ಹೇಗೆ ಧೈರ್ಯ ಬಂತು? ಹಣ ಯಾರಿಗೆ ಕೊಡಲು ತೆಗೆದುಕೊಂಡು‌ ಹೋಗುತ್ತಿದ್ದ‌? ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ತನಿಖಾ ಸಂಸ್ಥೆಗಳು ಕೇವಲ ಕಾಂಗ್ರೆಸ್ ನಾಯಕರ ವಿರುದ್ದ ಮಾತ್ರವೇ? :ಸ್ಯಾಂಟ್ರೋ ರವಿ ಸಿಎಂ ಜೊತೆ, ಅವರ ಫ್ಯಾಮಲಿ ಜತೆ ಹಾಗೂ ಸಚಿವರೊಂದಿಗೆ ಕೂಡಾ ಇದ್ದಾರೆ. ಇದನ್ನು ನೋಡಿದರೆ ಬಿಜೆಪಿಯವರು ಅಧಿಕಾರ ಹಿಡಿಯಲು ಯಾರ ಯಾರ ಕಾಲು ಹಿಡಿದಿದ್ದಾರೆ ಎನಿಸುತ್ತಿದೆ. ಇದೇನಾ ಆಡಳಿತ ನಡೆಸುವ ರೀತಿ? ಎಲ್ಲಿಗೆ ಹೋಯ್ತು ಕರ್ನಾಟಕದ ಗೌರವ. ಯಾರು ಕಂಬಿ ಎಣಿಸಬೇಕಿತ್ತೋ ಅವರು ಕುಮಾರಕೃಪಾದಲ್ಲಿ ಕುಳಿತು ಡೀಲ್ ಮಾಡುತ್ತಿದ್ದಾರೆ‌‌.

ಕೆಲ ಪ್ರಶ್ನೆಗಳಿಗೆ ಸಿಎಂ ಅಥವಾ ಹೋಂ ಮಿನಿಸ್ಟರ್ ಉತ್ತರ ಕೊಡಬೇಕು. ಮಾಜಿ ಸಿಎಂ ಒಬ್ರು ಹೇಳುತ್ತಾರೆ ರವಿ ಮೂಲಕ ಮೈತ್ರಿ ಸರ್ಕಾರ ಬೀಳಿಸಿದ್ದಾರೆ ಎಂದಿದ್ದಾರೆ. ಈ ಹಿಂದಿನ ಸತ್ಯಾಂಶ ಜನರಿಗೆ ಬಿಜೆಪಿ ತಿಳಿಸಲಿ. ಈ ಬಗ್ಗೆ ಮಾತನಾಡಬೇಕಿದ್ದ ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಯಾಕೆ ಮಾತನಾಡುತ್ತಿಲ್ಲ. ಭ್ರಷ್ಟಚಾರ ಹಗರಣ ಬಂದಾಗ ಅವರ ಬಾಯಿ ಬಂದ್ ಆಗುತ್ತದೆ ಎಂದು ಕಿಡಿಕಾರಿದರು.

ರವಿಗೆ ಕುಮಾರ ಕೃಪಾದಲ್ಲಿ ಇರಲು ಅವಕಾಶ ಕೊಟ್ಟಿದ್ದು ಯಾರು ? ಈ ಬಗ್ಗೆ ಸತ್ಯಾಂಶ ಹೊರಬರಲಿ. ಪೊಲೀಸ್ ಅಧಿಕಾರಿಗಳು ರವಿಗೆ ಫೋನ್ ಮಾಡಿ ವರ್ಗಾವಣೆಗೆ ಕೇಳುತ್ತಿದ್ದಾರೆ. ತನಿಖಾ ಸಂಸ್ಥೆಗಳು ಯಾಕೆ ಸುಮ್ಮನಿವೆ. ತನಿಖಾ ಸಂಸ್ಥೆಗಳು ಕೇವಲ ಕಾಂಗ್ರೆಸ್ ನಾಯಕರ ವಿರುದ್ದ ಮಾತ್ರವೇ? ಈ ಬಗ್ಗೆ ಸ್ವಯಂ ಪ್ರೇರಿತ ದೂರು ಯಾಕೆ ದಾಖಲಿಸಿಕೊಳ್ಳುತ್ತಿಲ್ಲ.? ಗೃಹ ಸಚಿವರಿಗೆ ಯಾರು ತಡೆಯುತ್ತಿದ್ದಾರೆ? ಎಂದು ಖರ್ಗೆ ಪ್ರಶ್ನಿಸಿದರು.

ಸರ್ಕಾರ ಈ ಕೂಡಲೇ ಎಲ್ಲ ಇಲಾಖೆಗಳ ವರ್ಗಾವಣೆ ನಿಲ್ಲಿಸಿ ತನಿಖೆ ನಡೆಸಬೇಕು. ಬಿಜೆಪಿಯವರು ಭ್ರಷ್ಟಾಚಾರ ಮಾಡುವುದಿಲ್ಲ ನಾ ಖಾವೂಂಗಾ ನಾ ಖಾನೇದೂಂಗಾ ಎನ್ನುವ ಮೋದಿ ಮಾತಿನಂತೆ ನಡೆಯುತ್ತೇವೆ ಎನ್ನುವವರು ಈ ಪ್ರಕರಣವನ್ನು ಸಿಬಿಐಗೆ ಕೊಡಲಿ ತನಿಖೆಯಿಂದ ಸತ್ಯ ಹೊರಬರಲಿದೆ ಎಂದರು.

ಪಿಎಸ್ಐ ಪರೀಕ್ಷಾ ಹಗರಣ: ಎಂತ ಸರ್ಕಾರಿ ವಕೀಲರನ್ನು ನೇಮಿಸಿದ್ದೀರಿ? :ಪಿಎಸ್ಐ ನೇಮಕಾತಿ ಪರಿಕ್ಷಾ ಹಗರಣದ ಪ್ರಮುಖರಿಗೆ ಬೇಲ್ ಸಿಕ್ಕಿರುವುದರ ಬಗ್ಗೆ ಕಿಡಿ ಕಾರಿದ ಖರ್ಗೆ, ಎಂತ ಸರ್ಕಾರಿ ವಕೀಲರನ್ನು ನೇಮಿಸಿದ್ದೀರಿ? ಸಾವಿರಾರು ಅಭ್ಯರ್ಥಿಗಳ ಭವಿಷ್ಯದ ಮೇಲೆ ಕಲ್ಲು ಹಾಕಿದವರಿಗೆ ಬೇಲ್ ಸಿಗುತ್ತಿದೆ ಎಂದರೆ ಹೇಗೆ? ಜೆಪಿ ನಡ್ಡಾ ಈ ರಾಜ್ಯದಲ್ಲಿ ತಿರುಗುತ್ತಿದ್ದಾರೆ ಈ ಬಗ್ಗೆಯೂ ಗಮನ ಹರಿಸಲಿ ಎಂದರು.

ಕೆಡಿಪಿ ಸಭೆ ಮುಂದೂಡುತ್ತಿರುವುದಕ್ಕೆ ಆಕ್ರೋಶ :ಪದೇ ಪದೇ ಕೆಡಿಪಿ ಮುಂದೂಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ, ಜಿಲ್ಲಾಡಳಿತಕ್ಕೆ ಕೆಡಿಪಿ ಹೇಗೆ ನಡೆಸಬೇಕು ಎನ್ನುವುದು ತಿಳಿದಿದೆಯೋ ಹೇಗೆ ಗೊತ್ತಿಲ್ಲ. ಆರು ದಿನಗಳ ಹಿಂದೆ ಕೆಡಿಪಿ ನಡೆಸುವುದಾಗಿ ಹೇಳಿ‌ ನೋಟಿಸು ಕೊಟ್ಟು ಇಂದು ನಿಗದಿ ಮಾಡಲಾಗಿತ್ತು. ಆದರೆ ಈಗ ಏಕಾಏಕಿ ನಾಳೆಗೆ ಮುಂದೂಡಲಾಗಿದೆ. ಇದನ್ನು ಗಮನಸಿದರೆ ಕಾಟಾಚಾರದ ಸಭೆ ಕರೆಯುತ್ತಿದ್ದಾರೆ ಎನಿಸುತ್ತದೆ. ಈ ಕೆಡಿಪಿಗೆ ನಾವು ಹೋಗಬೇಕಾ ಅಥವಾ ಬೇಡವಾ ಗೊತ್ತಾಗುತ್ತಿಲ್ಲ. ಕೇವಲ ಬಿಜೆಪಿಗರಿಗೆ ಅಥವಾ ಸಚಿವರಿಗೆ ಮಾತ್ರ ಕೆಲಸವಿದೆ ನಮಗೆ ಇಲ್ಲವಾ? ಎಂದು ಪ್ರಿಯಾಂಕ್ ಹೇಳಿದರು.

ಕಲಬುರಗಿ ಬಂದ್​ಗೆ ನಮ್ಮ ಬೆಂಬಲ :ರೈತಪರ ಸಂಘಟನೆಗಳು ಜ.17 ರಂದು ಕರೆ ನೀಡಿದ ಕಲಬುರಗಿ ಬಂದ್ ಗೆ ನಮ್ಮ ಬೆಂಬಲವಿದೆ. ರೈತರ ಪರ ಹೋರಾಟ ಮಾಡುವ ಯಾರೇ ಆಗಲಿ ಅವರ ಪರ ನಾವಿರುತ್ತೇವೆ ಎಂದು ಘೋಷಿಸಿದರು. ಇನ್ನು ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರಿಗೆ ಒಂದೇ ಒಂದು ಬಾರಿ ವಿಚಾರಣೆಗೆ ಕರೆಯದೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ‌. ಈಗ ಅರವಿಂದ ಲಿಂಬಾವಳಿ ಕೇಸಲ್ಲಿ ಕೂಡಾ ಅದೇ ಆಗುತ್ತದೆ. ನಾವು ಈಗಾಗಲೇ ಅವರ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಏನು ಹೇಳಬೇಕೋ ಅದನ್ನೇ ಹೇಳಿದ್ದೇವೆ ಎಂದರು.

ಇದನ್ನೂ ಓದಿ :ಗೃಹ ಸಚಿವ ಆರಗ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ABOUT THE AUTHOR

...view details