ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ರಿಯಲ್ ಎಸ್ಟೇಟ್ ಉದ್ಯಮಿಗಳು ಚರ್ಚೆ ನಡೆಸಿ ಕಾರ್ಮಿಕರ ಕೊರತೆಯ ಬಗ್ಗೆ ತಿಳಿಸಿದ್ದರು. ಈ ಬೆನ್ನಲ್ಲೇ ಬಿಹಾರಗೆ ತೆರಳಬೇಕಾದ ರೈಲುಗಳನ್ನು ಸರ್ಕಾರ ರದ್ದುಗೊಳಿಸಿದೆ.
ಬಿಹಾರಗೆ ತೆರಳಬೇಕಾದ ರೈಲು ರದ್ದು: ರಿಯಲ್ ಎಸ್ಟೇಟ್ ಬಿಲ್ಡರ್ಸ್ ಒತ್ತಡಕ್ಕೆ ಮಣಿದ ಬಿಎಸ್ವೈ? - ರಿಯಲ್ ಎಸ್ಟೇಟ್ ಬಿಲ್ಡರ್ಸ್ ಒತ್ತಡಕ್ಕೆ ಮಣಿದ್ರಾ ಬಿಎಸ್ವೈ
ಬೆಂಗಳೂರಿನಿಂದ ಬಿಹಾರದ ದಾನಾಪುರಕ್ಕೆ ಬೆಳಗ್ಗೆ 9 ಗಂಟೆ, ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 3ಕ್ಕೆ ಹೊರಡಬೇಕಾದ ರೈಲು ಸೇವೆ ಅಗತ್ಯವಿಲ್ಲವೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.
![ಬಿಹಾರಗೆ ತೆರಳಬೇಕಾದ ರೈಲು ರದ್ದು: ರಿಯಲ್ ಎಸ್ಟೇಟ್ ಬಿಲ್ಡರ್ಸ್ ಒತ್ತಡಕ್ಕೆ ಮಣಿದ ಬಿಎಸ್ವೈ? State government canceled train to Bihar](https://etvbharatimages.akamaized.net/etvbharat/prod-images/768-512-7077706-1044-7077706-1588736677506.jpg)
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ವಕೀಲ ವಿನಯ್ ಶ್ರೀನಿವಾಸ ರಿಯಲ್ ಎಸ್ಟೇಟ್ ಲಾಬಿಯ ಒತ್ತಡಕ್ಕೊಳಗಾಗಿ ಬಡ ಕಾರ್ಮಿಕರು ಊರಿಗೆ ಹೋಗಲು ಆಯೋಜಿಸಿದ ರೈಲುಗಳನ್ನು ರದ್ದು ಮಾಡಿ ಸರ್ಕಾರ ಅನ್ಯಾಯ ಮಾಡುತ್ತಿದೆ, ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.