ಕರ್ನಾಟಕ

karnataka

ETV Bharat / state

ಆಗಸ್ಟ್ 31ರಂದು ಕೆಎಂಎಫ್ ಚುನಾವಣೆ.. ವಿಳಂಬ ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಿದ್ದ ಹೆಚ್.ಡಿ.ರೇವಣ್ಣ - high court news today

ಆಗಸ್ಟ್​ 31ರಂದು ಕೆಎಂಎಫ್ ಚುನಾವಣೆ ನಡೆಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ಸಲ್ಲಿಸಿದೆ. ಈ ಚುನಾವಣೆ ವಿಳಂಬ ಕುರಿತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೈಕೋರ್ಟ್​ಗೆ ಅರ್ಜಿ ಸಲ್ಲಸಿದ್ದರು.

ಮಾಜಿ ಸಚಿವ ರೇವಣ್ಣ

By

Published : Aug 22, 2019, 8:57 PM IST

ಬೆಂಗಳೂರು: ರಾಜಕೀಯವಾಗಿ ಸಾಕಷ್ಟು ಕುತೂಹಲ ಕೆರಳಿಸಿರುವ ಪ್ರತಿಷ್ಠಿತ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಆಗಸ್ಟ್ 31ರಂದು ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಧಾರಿಸಿದೆ.

ಮಾಜಿ ಸಚಿವ ರೇವಣ್ಣ

ಕೆಎಂಎಫ್ ಚುನಾವಣೆಯನ್ನ ರಾಜ್ಯ ಸರ್ಕಾರ ಮುಂದೂಡಿರುವ ಕ್ರಮ ಪ್ರಶ್ನಿಸಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೈಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣ ಸಂದರ್ಭದಲ್ಲಿ, ಸಹಕಾರ ಇಲಾಖೆಯು ನ್ಯಾಯಲಯಕ್ಕೆ ಮಾಹಿತಿ ನೀಡಿದೆ.

ಕೆ ಎಂಎಫ್​ಗೆ ತಕ್ಷಣವೇ ಚುನಾವಣೆ ನಡೆಸಲು ಆದೇಶಿಸಬೇಕೆಂದು ಹೆಚ್.ಡಿ.ರೇವಣ್ಣ ಅರ್ಜಿ ಸಲ್ಲಿಸಿದರು.

ಚುನಾವಣೆಗೆ ಅವಕಾಶ ನೀಡಲು ನಿರ್ದೇಶಿಸಬೇಕೆಂದು ಹೆಚ್.ಡಿ.ರೇವಣ್ಣ ಸೇರಿ 8 ಜನರು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್​ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ವಿಚಾರಣೆ ನಡೆಸಿದರು.

ಕಳೆದ ಜುಲೈ 29 ರಂದು ಚುನಾವಣೆ ನಡೆಯಬೇಕಿತ್ತು. ಆದರೆ, ಚುನಾವಣಾ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅಧಿಕಾರ ಹಿಡಿದ ಸಮ್ಮಿಶ್ರ ಆಡಳಿತ ಬಹುಮತ ಕಳೆದುಕೊಂಡಿತ್ತು. ಈ ವೇಳೆ ಕೆಎಂಎಫ್ ಚುನಾವಣಾ ನಿಗಧಿಯಾಗಿದ್ದರಿಂದ ಮುಂದುಡಲಾಗಿತ್ತು.

ABOUT THE AUTHOR

...view details