ಬೆಂಗಳೂರು : 65ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ರ‍್ಯಾಲಿಯನ್ನು ನಡೆಸಲಾಯಿತು.
65ನೇ ವನ್ಯಜೀವಿ ಸಪ್ತಾಹ: ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ರ‍್ಯಾಲಿ
65ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ರ‍್ಯಾಲಿಯನ್ನು ನಡೆಸಲಾಯಿತು.
awareness rally aತ Bangalore
ನಗರದ ಕಬ್ಬನ್ ಪಾರ್ಕ್ನ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆಯಿಂದ ಆರಂಭವಾದ ಈರ‍್ಯಾಲಿ ವಿಧಾನಸೌಧ, ಯುವಿಸಿಇ ಸರ್ಕಲ್, ನೃಪತುಂಗ ರಸ್ತೆಗಳ ಮುಖಾಂತರ ಟೌನ್ ಹಾಲ್, ಸುಬ್ಬಯ್ಯ ಸರ್ಕಲ್, ಮಿಷನ್ ರಸ್ತೆ, ರಿಚ್ಮಂಡ್ ಸರ್ಕಲ್, ರೆಸಿಡೆನ್ಸಿ ರೋಡ್ ಎಂ.ಜಿ ರೋಡ್, ಕ್ವೀನ್ಸ್ ರಸ್ತೆ, ರಾಜಭವನ, ಚಾಲುಕ್ಯ ಸರ್ಕಲ್, ಸ್ಯಾಂಕಿ ರಸ್ತೆ , ಸರ್ ಸಿ.ವಿ. ರಾಮನ್ ರಸ್ತೆ, ಸದಾಶಿವನಗರ ಪೊಲೀಸ್ ಸ್ಟೇಷನ್ ಜಂಕ್ಷನ್ ಮೂಲಕ ಸಾಗಿ ಗೆಸ್ಟ್ ಹೌಸ್ ಬಳಿ ಸಾಗಿ ಬಂದು ಅಂತ್ಯವಾಯಿತು.
ಈ ಮೂಲಕ ವನ್ಯ ಜೀವಿಗಳನ್ನು ರಕ್ಷಿಸಿ, ಕಾಡು ಉಳಿಸುವಂತೆ ಜನರಲ್ಲಿ ಅರಿವು ಮೂಡಿಸಲಾಯಿತು.