ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 676 ಮಂದಿಯಲ್ಲಿ ಕೋವಿಡ್‌ ದೃಢ: ಸಾವಿನ ಸಂಖ್ಯೆ ಶೂನ್ಯ - ಕರ್ನಾಟಕ ಕೊರೊನಾ ಪ್ರಕರಣ

ರಾಜ್ಯದಲ್ಲಿ ಇಂದು 676 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 804 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

corona
corona

By

Published : Jun 22, 2022, 9:55 PM IST

ಬೆಂಗಳೂರು: ರಾಜ್ಯದಲ್ಲಿಂದು 9,400 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 676 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬುಧವಾರ 804 ಮಂದಿ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯತನಕ ಒಟ್ಟು 39,17,770 ಮಂದಿ ಗುಣಮುಖರಾಗಿದ್ದಾರೆ. ಇಂದು ಕೋವಿಡ್ ಸಾವಿನ ಸಂಖ್ಯೆ ಶೂನ್ಯವಿದ್ದು. ಸಕ್ರಿಯ ಪ್ರಕರಣಗಳ ಸಂಖ್ಯೆ 4,892 ರಷ್ಟಿದೆ.

ಈ ಮೂಲಕ ಸೋಂಕಿತರ ಪ್ರಮಾಣ ಶೇ. 7.19 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 3.79 ರಷ್ಟಿದೆ. ಇಲ್ಲಿಯವರೆಗೂ ಪರೀಕ್ಷಿಸಲಾದ ಒಟ್ಟು ಸಂಖ್ಯೆ 66,80,0865. ವಾರದ ಸಾವಿನ ಪ್ರಮಾಣ ಶೇ. 0.08. ವಿಮಾನ ನಿಲ್ದಾಣದಿಂದ ಇಂದು ತಪಾಸಣೆಗೆ 9,584 ಮಂದಿ ಒಳಗಾಗಿದ್ದು, ಇದುವರೆಗೂ 10,94,235 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.

ಇದನ್ನೂ ಓದಿ:ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ನಟ ದಿಗಂತ್​ ಡಿಸ್ಚಾರ್ಜ್​

ಬೆಂಗಳೂರಿನಲ್ಲಿ ಇಂದು 626 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 17,97,860 ಕ್ಕೇರಿದೆ. ಇಂದು 780 ಮಂದಿ ಬಿಡುಗಡೆಯಾಗಿದ್ದು, ಇದುವರೆಗೆ 17,76,228 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಸಾವಿನ ಸಂಖ್ಯೆ ಶೂನ್ಯವಿದೆ. ಕೋವಿಡ್ ಸಾವಿನ ಸಂಖ್ಯೆ 16,966 ರಷ್ಟಿದೆ. ಸಕ್ರಿಯ ಪ್ರಕರಣಗಳು 4,665 ಇದೆ.

ABOUT THE AUTHOR

...view details