ಬೆಂಗಳೂರು :ರಾಜ್ಯದಲ್ಲಿಂದು 1,12,524 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 300 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 30,02,427ಕ್ಕೆ ಏರಿಕೆ ಆಗಿದೆ.
279 ಮಂದಿ ಗುಣಮುಖರಾಗಿದ್ದು, ಈತನಕ 29,56,970 ಡಿಸ್ಜಾರ್ಜ್ ಆಗಿದ್ದಾರೆ. ಉಡುಪಿಯಲ್ಲಿ ಸೋಂಕಿಗೆ ಇಂದು ಒಬ್ಬರು ಮೃತರಾಗಿದ್ದು, ಸಾವಿನ ಸಂಖ್ಯೆ 38,288ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 7140ಕ್ಕೆ ಏರಿಕೆ ಕಂಡಿದೆ.
ಈ ಮೂಲಕ ಸೋಂಕಿತರ ಪ್ರಮಾಣ ಶೇ.0.26% ರಷ್ಟಿದೆ. ಸಾವಿನ ಪ್ರಮಾಣ ಶೇ. 0.33 ರಷ್ಟು ಇದೆ. ವಿಮಾನ ನಿಲ್ದಾಣದಿಂದ 4,899 ಪ್ರಯಾಣಿಕರು ತಪಾಸಣೆಗೊಳಪಟ್ಟಿದ್ದು, ಹೈರಿಸ್ಕ್ ದೇಶದಿಂದ 1599 ಜನರು ಆಗಮಿಸಿದ್ದಾರೆ.