ಬೆಂಗಳೂರು: ರಾಜ್ಯದಲ್ಲಿಂದು 366 ಮಂದಿಗೆ ಕೊರೊನಾ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,43,212ಕ್ಕೆ ಏರಿಕೆ ಆಗಿದೆ.
2 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 12,241ಕ್ಕೆ ಏರಿದೆ. 513 ಮಂದಿ ಗುಣಮುಖರಾಗಿದ್ದು, 9,25,167 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 5785 ಇದ್ದು, 143 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಪ್ರಕರಣಗಳ ಶೇಕಡಾವಾರು 0.60ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.54ರಷ್ಟು ಇದೆ. ಯುಕೆಯಿಂದ ಇಂದು 262 ಪ್ರಯಾಣಿಕರು ಆಗಮಿಸಿದ್ದು, ಪ್ರಯಾಣಿಕರಲ್ಲಿ ಈವರೆಗೆ 59 ಜನಕ್ಕೆ ಪಾಸಿಟಿವ್ ಬಂದಿದೆ. ಈ ಸೋಂಕಿತರ ಸಂಪರ್ಕದಲ್ಲಿದ್ದ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದೆ. 21 ಜನರಿಗೆ ರೂಪಾಂತರ ಕೊರೊನಾ ಹರಡಿದೆ. ವಿಮಾನ ನಿಲ್ದಾಣದಿಂದ 2290 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೊಳ್ಳಪಟ್ಟಿದ್ದಾರೆ.
ಓದಿ:ಜಮೀನು ತತ್ಕಾಲ್ ಪೋಡಿ ಮಾಡಿಸಲು ಲಂಚ ಸ್ವೀಕಾರ : ಭೂ ಮೋಜಣಿದಾರ ಎಸಿಬಿ ಬಲೆಗೆ
ಬೆಂಗಳೂರಿನಲ್ಲಿಂದು 195 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಸೋಂಕಿತರ 4,00,887ಕ್ಕೆ ಏರಿಕೆ ಆಗಿದೆ. 326 ಜನ ಗುಣಮುಖರಾಗಿದ್ದು, 3,92,715 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 3763 ಸಕ್ರಿಯ ಪ್ರಕರಣಗಳು ಇದ್ದು, 2 ಜನ ಮೃತರಾಗಿದ್ದಾರೆ. ಈವರೆಗೆ 4,408 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.