ಬೆಂಗಳೂರು: ರಾಜ್ಯದಲ್ಲಿಂದು 677 ಜನರಿಗೆ ಕೊರೊನಾ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,53,813 ತಲುಪಿದೆ.
4 ಮಂದಿ ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆಯು 12,354 ಕ್ಕೇರಿದೆ. 427 ಮಂದಿ ಗುಣಮುಖರಾಗಿದ್ದು 9,35,066 ಜನ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 6,374 ಇದ್ದು, 112 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಕರಣಗಳ ಶೇ 0.85 ರಷ್ಟಿದ್ದರೆ, ಮೃತಪಟ್ಟವರ ಪ್ರಮಾಣ ಶೇ.0.59 ರಷ್ಟಿದೆ.