ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 3310 ಮಂದಿಗೆ ಸೋಂಕು : 114 ಮಂದಿ ಕೊರೊನಾಗೆ ಬಲಿ.. - ಡೆಲ್ಟಾ ಪ್ಲಸ್

ಯುಕೆಯ ರೂಪಾಂತರಿ ವೈರಸ್ ಅಲ್ಪಾ(Alpha/B.1.1.7) 127 ಜನರಲ್ಲಿ ಕಾಣಿಸಿಕೊಂಡಿದ್ದರೆ, ಇತ್ತ ಸೌತ್ ಆಫ್ರಿಕಾದ ಬೇಟಾ ವೈರಸ್ (BETA/B.1.351) 6 ಜನರಲ್ಲಿ ಪತ್ತೆಯಾಗಿದೆ. ಹಾಗೆಯೇ ಭಾರತದ ರೂಪಾಂತರಿ(Delta/B.617.2) ಡೆಲ್ಟಾ 318 ಜನರಿಗೆ, ಕಪ್ಪಾ ಸೋಂಕು (Kappa/B.1.617) 112 ಮಂದಿಯಲ್ಲಿ ಕಾಣಿಸಿದೆ..

corona
ಕೊರೊನಾ

By

Published : Jun 25, 2021, 8:02 PM IST

ಬೆಂಗಳೂರು :ರಾಜ್ಯದಲ್ಲಿಂದು 1,58,072 ಜನರಿಗೆ ಕೊರೊನಾ‌ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 3310 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,26,754ಕ್ಕೆ ಏರಿಕೆ ಕಂಡಿದ್ದು, ಪಾಸಿಟಿವಿಟಿ ದರ ಶೇ.2.09ರಷ್ಟು ದಾಖಲಾಗಿದೆ. ಇನ್ನು, 6524 ಸೋಂಕಿತರು ಗುಣಮುಖರಾಗಿದ್ದು, ಈ ತನಕ‌ 26,84,997 ಜನರು ಡಿಸ್ಜಾರ್ಜ್ ಆಗಿದ್ದಾರೆ.

ಸದ್ಯ ಸಕ್ರೀಯ ಪ್ರಕರಣಗಳು 1,07,195 ರಷ್ಟು ಇದ್ದು, ಕೋವಿಡ್​ಗೆ 114 ಸೋಂಕಿತರು ಮೃತರಾಗಿದ್ದಾರೆ. ಸಾವಿನ ಸಂಖ್ಯೆ 34,539ಕ್ಕೆ ಏರಿದ್ದು, ಸಾವಿನ‌ ಶೇಕಡವಾರು ಪ್ರಮಾಣ ಮತ್ತೆ 3.44% ರಷ್ಟು‌ ದಾಖಲಾಗಿದೆ. ಯುಕೆಯಿಂದ 140 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದು, ತಪಾಸಣೆ ಗೊಳಪಟ್ಟಿದ್ದಾರೆ.

ಯುಕೆಯ ರೂಪಾಂತರಿ ವೈರಸ್ ಅಲ್ಪಾ(Alpha/B.1.1.7) 127 ಜನರಲ್ಲಿ ಕಾಣಿಸಿಕೊಂಡಿದ್ದರೆ, ಇತ್ತ ಸೌತ್ ಆಫ್ರಿಕಾದ ಬೇಟಾ ವೈರಸ್ (BETA/B.1.351) 6 ಜನರಲ್ಲಿ ಪತ್ತೆಯಾಗಿದೆ. ಹಾಗೆಯೇ ಭಾರತದ ರೂಪಾಂತರಿ (Delta/B.617.2) ಡೆಲ್ಟಾ 318 ಜನರಿಗೆ, ಕಪ್ಪಾ (Kappa/B.1.617) 112 ಮಂದಿಗೆ ಸೋಂಕು ಕಾಣಿಸಿದೆ. ಇದೀಗ ಡೆಲ್ಟಾ ಪ್ಲಸ್( Delta plus/ B.1.617.2.1(AY.1) ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಎಚ್ಚರಿಕೆ ವಹಿಸುವ ಅಗತ್ಯವಿದೆ.

ಓದಿ:ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ; ಡೆಲ್ಟಾ ಪ್ಲಸ್ ತಡೆಗೆ ಸರ್ಕಾರದ ಕ್ರಮ

ABOUT THE AUTHOR

...view details