ಬೆಂಗಳೂರು: ಬಡ ಜನರಿಗೆ ಆಹಾರ ವಿತರಿಸುವ ಕಾರ್ಯವನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಮುಂದುವರೆಸಿದೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕರ್ನಾಟಕ ಮೂಲದವರಾದ ಶ್ರೀನಿವಾಸ್ ಬಿ.ವಿ. ನೇತೃತ್ವದಲ್ಲಿ ಕಳೆದ ಕೆಲ ದಿನಗಳಿಂದ ಉಚಿತ ಆಹಾರ ಪೂರೈಕೆ ಮಾಡಲಾಗುತ್ತಿದೆ. ಹಸಿದ ಜನರಿಗೆ ಆಹಾರ ನೀಡುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಶ್ರೀನಿವಾಸ್ ನೇತೃತ್ವದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ನಡೆಸುತ್ತಿರುವ ಉದಾತ್ತ ಕಾರ್ಯವನ್ನು ಬಣ್ಣಿಸಿರುವ ರಾಜ್ಯ ಕಾಂಗ್ರೆಸ್, ಬಹಳಷ್ಟು ಬಡವರು, ಕೂಲಿ ಕಾರ್ಮಿಕರು ಹಸಿವಿನಿಂದ ತತ್ತರಿಸುತ್ತಿದ್ದಾರೆ. ಮಾನವೀಯತೆ ತೋರಿ ಅವರಿಗೆ ಸಹಾಯ ಮಾಡುವ ಸಮಯವಿದು. ಸ್ಥಳೀಯ ಆಡಳಿತದೊಂದಿಗೆ ಸೇರಿ ತುಂಬಾ ಅಗತ್ಯವಿರುವವರಿಗೆ ಸಹಾಯ ಮಾಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಕೆಲಸ ಶ್ಲಾಘನೀಯ ಎಂದು ಅಭಿನಂದಿಸಿದೆ.