ಕರ್ನಾಟಕ

karnataka

ETV Bharat / state

ನೌಕರಿ ಕಿ ಬಾತ್: ಬಿಜೆಪಿ ವಿರುದ್ಧ ನಿರುದ್ಯೋಗ ಅಸ್ತ್ರ, ರಾಜ್ಯ ಕಾಂಗ್ರೆಸ್‌ನಿಂದ ಮಿಸ್ಡ್‌ ಕಾಲ್ ಅಭಿಯಾನ - ಬೆಂಗಳೂರು ಸುದ್ದಿ

ನಿರುದ್ಯೋಗ‌ ಸಮಸ್ಯೆ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಹೋರಾಟ ನಡೆಸಲು ರಾಜ್ಯ ಕಾಂಗ್ರೆಸ್ ಮುಂದಾಗಿದೆ.

State congress leaders to use unemployment weapon against BJP!
ಬಿಜೆಪಿ ವಿರುದ್ಧ ನಿರುದ್ಯೋಗ ಅಸ್ತ್ರ ಬಳಸಲು ಮುಂದಾದ ರಾಜ್ಯ ಕೈ ನಾಯಕರು!

By

Published : Jan 24, 2020, 12:12 PM IST

ಬೆಂಗಳೂರು:ನಿರುದ್ಯೋಗ‌ ಸಮಸ್ಯೆ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಹೋರಾಟ ನಡೆಸಲು ರಾಜ್ಯ ಕಾಂಗ್ರೆಸ್ ಮುಂದಾಗಿದ್ದು, ಮಿಸ್ಡ್ ಕಾಲ್ ಮೂಲಕ ಅಭಿಯಾನ ನಡೆಸಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ.

ಬಿಜೆಪಿ ವಿರುದ್ಧ ನಿರುದ್ಯೋಗ ಅಸ್ತ್ರ ಬಳಸಲು ಮುಂದಾದ ರಾಜ್ಯ ಕೈ ನಾಯಕರು

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಜಾರಿಗೆ ನಿರ್ಧರಿಸಿರುವ ಬಿಜೆಪಿ ತಮ್ಮ ಪರವಾಗಿ ಮಿಸ್ಡ್​ಕಾಲ್ ಅಭಿಯಾನ ಪ್ರಾರಂಭಿಸಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಜನರಿಗೆ ಮನದಟ್ಟು ಮಾಡಲು ಹಾಗೂ ದೇಶ, ರಾಜ್ಯದಲ್ಲಿನ ನಿರುದ್ಯೋಗಿಗಳ ಮಾಹಿತಿ ಸಂಗ್ರಹಿಸಲು ನಿರುದ್ಯೋಗಿಗಳಿಂದ 8151994411 ನಂಬರ್​ಗೆ ಮಿಸ್ಡ್​ಕಾಲ್ ಕೊಡುವ ಅಭಿಯಾನ ಶುರು ಮಾಡಿದೆ.

ABOUT THE AUTHOR

...view details