ಬೆಂಗಳೂರು: ರಾಜ್ಯ ಲಿಂಗಾಯತ ಸಮುದಾಯದ ಕಾಂಗ್ರೆಸ್ ಮುಖಂಡರು ಇಂದು ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಅವರನ್ನು ಇಂದು ಭೇಟಿ ಮಾಡಿದ ಲಿಂಗಾಯತ ಮುಖಂಡರು ಸಮುದಾಯಕ್ಕೆ ಹೆಚ್ಚಿನ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರನ್ನು ಭೇಟಿಯಾದ ನಿಯೋಗದಲ್ಲಿ ಸಮುದಾಯದ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಎಂಬಿ ಪಾಟೀಲ್, ಈಶ್ವರ ಖಂಡ್ರೆ, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರು, ಅಲ್ಲಮ್ ವೀರಭದ್ರಪ್ಪ ಇದ್ದರು. 70 ಸ್ಥಾನಗಳಿಗೆ ಬೇಡಿಕೆ ಇಟ್ಟಿರುವ ಕಾಂಗ್ರೆಸ್ ಲಿಂಗಾಯತ ಮುಖಂಡರು ಹೆಚ್ಚು ಟಿಕೆಟ್ ಪಡೆದು, ಸಮುದಾಯದ ಶಾಸಕರು ಹೆಚ್ಚು ಗೆದ್ದರೆ ಸಿಎಂ ಸ್ಥಾನದ ಬೇಡಿಕೆ ಇಡುವ ಲೆಕ್ಕಾಚಾರದಲ್ಲಿ ಇದ್ದಾರೆ.
ಬಿಜೆಪಿ ಭರವಸೆಗೆ ಮಸಿ ಬಳಿದ ಕಾಂಗ್ರೆಸ್:ಚುನಾವಣಾ ಪ್ರಚಾರಕ್ಕೆ ರಾಜರಾಜೇಶ್ವರಿನಗರ ಕ್ಷೇತ್ರದೆಲ್ಲೆಡೆ "ಬಿಜೆಪಿಯೇ ಭರವಸೆ" ಎಂಬ ಘೋಷಣೆಯಡಿ ಬರೆಸಿದ್ದ ಪೇಂಟಿಂಗ್ ಗೆ 40% ಎಂದು ರಾಜರಾಜೇಶ್ವರಿನಗರ ಕಾಂಗ್ರೆಸ್ ಕಾರ್ಯಕರ್ತರು ಬರೆದಿದ್ದಾರೆ. ಸಚಿವ ಮುನಿರತ್ನಗೆ ಇದು ಇರಿಸು ಮುರಿಸು ತಂದಿದೆ.ಇನ್ನು ಬಿಜೆಪಿ ಜಾಹಿರಾತಿನ ಮೇಲೆ ಕಣ್ಣಿಗೆ ರಾಚುತ್ತಿರುವ 40% ಬರಹಗಳು, ಇದು ರಾಜರಾಜೇಶ್ವರಿನಗರ ಕಾಂಗ್ರೆಸ್ ಕಾರ್ಯಕರ್ತರ ವಿನೂತನ ಪ್ರತಿಭಟನೆ ಎಂದು ಹೇಳಿಕೊಳ್ಳಲಾಗಿದೆ.