ಕರ್ನಾಟಕ

karnataka

ETV Bharat / state

ರಾಜ್ಯ ಸಚಿವ ಸಂಪುಟ ಪುನಾರಚನೆ ಹೈಕಮಾಂಡ್ ಮತ್ತು ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದು : ಸತೀಶ್ ರೆಡ್ಡಿ - ಸಂಪುಟ ಪುನಾರಚನೆ ಹೈಕಮಾಂಡ್ ತೀರ್ಮಾನ

ಪ್ರಧಾನಿ ನರೇಂದ್ರ ಮೋದಿ ಹೇಳಿದ ಹಾಗೆ ಮೂರನೇ ಅಲೆ ನಾವಾಗಿ ನಾವೇ ತಂದುಕೊಳ್ಳುವ ಮಟ್ಟಕ್ಕೆ ಇಳಿಯಬಾರದು. ಹೀಗಾಗಿ, ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್ ಮತ್ತು ಕಡ್ಡಾಯ ಲಸಿಕೆ ಪಡೆಯುವ ಮೂಲಕ ಎಚ್ಚರಿಕೆಯಿಂದ ಬಿಬಿಎಂಪಿ, ಸರ್ಕಾರ ಮತ್ತು ಸಾರ್ವಜನಿಕರು ಒಗ್ಗೂಡಿ 3ನೇ ಅಲೆ ನಿಯಂತ್ರಿಸಬೇಕು..

Satish Reddy
ಸತೀಶ್ ರೆಡ್ಡಿ

By

Published : Jul 18, 2021, 4:15 PM IST

ಬೆಂಗಳೂರು :ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಸಿಎಂ ರಾಜ್ಯದ ಬೆಳವಣಿಗೆ ಕುರಿತು ಮಾತನಾಡಿರಬಹುದು. ಆದರೆ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಮಾಹಿತಿ ಲಭ್ಯವಿಲ್ಲ. ಈ ಕುರಿತು ಬಿಜೆಪಿಯ ಕೇಂದ್ರ ಸಮಿತಿ ಸ್ಪಷ್ಟಪಡಿಸಿಲ್ಲ. ಸಿಎಂ ಮತ್ತು ಬಿಜೆಪಿಯ ಹೈಕಮಾಂಡ್ ಅಂಗಳದಲ್ಲಿ ಸಚಿವ ಸಂಪುಟ ವಿಸ್ತರಣೆಯ ವಿಚಾರವಿದೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಹೇಳಿದರು.

ಬೊಮ್ಮನಹಳ್ಳಿ ಭಾಗದಲ್ಲಿ ಖಾಸಗಿ-ಬಿಬಿಎಂಪಿ ಸಹಭಾಗಿತ್ವದಲ್ಲಿ ಲಸಿಕಾ ಅಭಿಯಾನ ಕಾರ್ಯಕ್ರನಕ್ಕೆ ಚಾಲನೆ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೊಮ್ಮನಹಳ್ಳಿಯಲ್ಲಿ 18 ವರ್ಷದ ಮೇಲ್ಪಟ್ಟವರಿಗೆ ಉಚಿತವಾಗಿ ಎನ್​​ಜಿಒ ಸಂಸ್ಥೆ ಹಾಗೂ ಬಿಬಿಎಂಪಿಗಳ ಸಹಯೋಗದಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಇಂದು ಚಾಲನೆ ನೀಡಿದ್ದೇವೆ.

ದಿನನಿತ್ಯ 10 ವಾರ್ಡ್​ಗಳಲ್ಲಿ ತಲಾ 500 ರಿಂದ1000 ಲಸಿಕೆಯನ್ನು ಕಳೆದ ಮೂರು ತಿಂಗಳಿಂದ ನಿರಂತರವಾಗಿ ಬೀದಿ ಬದಿ ವ್ಯಾಪಾರಿಗಳಿಗೆ, ಕೊಳಚೆ ಪ್ರದೇಶ ವಾಸಿಗಳಿಗೆ, ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಸಾರ್ವಜನಿಕರಿಗೂ ನೀಡಲಾಗಿದೆ.

ಈಗಾಗಲೇ 1 ಲಕ್ಷದ 75 ಸಾವಿರ ಲಸಿಕೆ ಪೂರ್ಣಗೊಂಡಿದೆ. ಅದರಲ್ಲಿ ಗಾರ್ಮೆಂಟ್ಸ್ ಕಾರ್ಮಿಕರಿಗೆ 40,000 ಲಸಿಕೆ ಕೊಡಿಸಲಾಗಿದೆ. ಹೊಂಗಸಂದ್ರ ವಾರ್ಡಿನಲ್ಲಿ 1500, ಬೊಮ್ಮನಹಳ್ಳಿ ವಾರ್ಡಿನಲ್ಲಿ 1,500 ಲಸಿಕೆ ನೀಡಲಾಗ್ತಿದೆ. ಮುಂದಿನವಾರ 3,000 ಜನಕ್ಕೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ ಎಂದರು.

ಕೊರೊನಾ ನಿಯಂತ್ರಣ ಕುರಿತಂತೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯೆ

ಮೂರನೇ ಅಲೆಗೆ ಸಿದ್ಧತೆ :

ಮೂರನೇ ಅಲೆಗೆ ಪೂರ್ವಭಾವಿಯಾಗಿ ಬೊಮ್ಮನಹಳ್ಳಿ ಭಾಗದಲ್ಲಿ ಸಕಲ ಸಿದ್ಧತೆಗಳನ್ನು ನಿರ್ವಹಿಸುವಲ್ಲಿ ಪ್ರಥಮ ಆದ್ಯತೆ ನೀಡಲಾಗಿದೆ. ಈಗಾಗಲೇ 250 ಹಾಸಿಗೆಗಳನ್ನು ಮಕ್ಕಳಿಗಾಗಿ ಮೀಸಲಿಡಲಾಗಿದೆ. ಬಿಬಿಎಂಪಿ ಕಡೆಯಿಂದಲೂ ಹಾಸಿಗೆ ಮೀಸಲಿರಿಸಲು ಸೂಚಿಸಲಾಗಿದೆ. ತಜ್ಞರ ಸಲಹೆ ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗಿನಿಂದಲೇ ಲಸಿಕಾ ಅಭಿಯಾನ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾದರೆ ಮೂರನೇ ಅಲೆಯನ್ನು ತಡೆಗಟ್ಟಬಹುದು ಎನ್ನುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಸಮರೋಪಾದಿಯಾಗಿ ನಿರ್ವಹಿಸಲಾಗುತ್ತಿದೆ‌ ಎಂದರು.

ಕೋವಿಡ್​ ನಿಯಮ ಪಾಲನೆಗೆ ಮನವಿ :

ಪ್ರಧಾನಿ ನರೇಂದ್ರ ಮೋದಿ ಹೇಳಿದ ಹಾಗೆ ಮೂರನೇ ಅಲೆ ನಾವಾಗಿ ನಾವೇ ತಂದುಕೊಳ್ಳುವ ಮಟ್ಟಕ್ಕೆ ಇಳಿಯಬಾರದು. ಹೀಗಾಗಿ, ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್ ಮತ್ತು ಕಡ್ಡಾಯ ಲಸಿಕೆ ಪಡೆಯುವ ಮೂಲಕ ಎಚ್ಚರಿಕೆಯಿಂದ ಬಿಬಿಎಂಪಿ, ಸರ್ಕಾರ ಮತ್ತು ಸಾರ್ವಜನಿಕರು ಒಗ್ಗೂಡಿ 3ನೇ ಅಲೆ ನಿಯಂತ್ರಿಸಬೇಕು ಎಂದು ಮನವಿ ಮಾಡಿದರು.

ಓದಿ: ರಂಗಮಂದಿರ, ಚಿತ್ರಮಂದಿರ ತೆರೆಯಲು ಅನುಮತಿ, ಕ್ಲಬ್‌ಗಳಿಗೆ ಇನ್ನೂ ಪರ್ಮಿಷನ್‌ ಸಿಕ್ಕಿಲ್ಲ : ಆರ್​. ಅಶೋಕ್​​

ABOUT THE AUTHOR

...view details